ಈ ವರ್ಷ ಕನ್ನಡಕ್ಕೆ ನಿಮ್ಮ ಕೊಡುಗೆ ಏನು ಎನ್ನುವುದನ್ನು ಪ್ರಶ್ನಿಸಿಕೊಳ್ಳಿ

ಕರ್ನಾಟಕ ರಾಜ್ಯೋತ್ಸವದಂದು ಅರೆಗನ್ನಡದಲ್ಲಿ ವಯ್ಯಾರದಿಂದ ಬಳುಕುತ್ತ ಶುಭಾಶಯ ಕೋರುವಂತ ನಟಿ ಮಣಿಗಳು.
ಕನ್ನಡ ಬಾರದಿದ್ದರೂ ಚಳುವಳಿಗಾರರಿ ಹೆದರಿ ಬಾವುಟ ಹಿಡಿದು ಬರುವ ಅದೆಷ್ಟೋ ಹಿಂದಿವಾಲಾ ಮಾರ್ವಾಡಿಗಳು.
ಕರಾವಳಿಯ ಜನತೆಯಲ್ಲಿ ಇರುವಂತ ತುಳು ಭಾಷಾ ಪ್ರೇಮದಿಂದ ಸಂವಿಧಾನಾತ್ಮಕವಾಗಿ ಕೇಳುವ ತುಳುನಾಡಿನ ಕೂಗೂ.
ಇವೆಲ್ಲರ ನಡುವೆ ಗಡಿಯಲ್ಲಿ MES ಪುಂಡರ ಕಪ್ಪು ಬಾವುಟ ಪ್ರದರ್ಶನದಂತ ವಿಕೃತ ಹೃದಯಿಗಳು.
ಆದರೂ ಸಹ ಕನ್ನಡಾಂಬೆಯ ಭಕ್ತರ ಮುಂದೆ ಇದೆಲ್ಲವು ಮೆಟ್ಟಿ ನಿಂತಿದೆಯೆಂದರೆ ಕರ್ನಾಟಕದ ಜನತೆಯ ವೈಶ್ಯಾಲ್ಯತೆ ಮತ್ತು ಧೈರ್ಯ ಮೆಚ್ಚಲೇ ಬೇಕು.

ಕನ್ನಡ ಭಾಷೆಯ ಬಗ್ಗೆ ಆಳವಾಗಿ ಕೆದುಕುತ್ತ ಹೋದರೆ  ಸಾವಿರಾರು ವರ್ಷದ ಇತಿಹಾಸ ಸಿಗುತ್ತದೆ.
ನವೆಂಬರ್ ಒಂದನೆ ತಾರೀಖಿನಂದು ಹುಟ್ಟಿದ ನನಗೆ ಪ್ರತಿ ಹುಟ್ಟುಹಬ್ಬ  ಹೊಸ ಉಲ್ಲಾಸ ತರುತ್ತದೆ ಮತ್ತು ಕಳೆದ ವರ್ಷಕ್ಕಿಂತ ಈ ವರ್ಷ ಕನ್ನಡಕ್ಕೇನಾದರೂ ಮಾಡಬೇಕೆನ್ನುವ ತುಡಿತ ಇಮ್ಮಡಿಯಾಗುತ್ತದೆ.

ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು.
ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ.
ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು.
ಕನ್ನಡವು ದಕ್ಷಿಣ ಭಾರತದ ಮೂಲಭಾಷೆ ದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ.


ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಇಲ್ಲಿ ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರು ಈಚೆಗೆ ಕೆಲಸ ಹುಡುಕಿಕೊಂಡು ವಲಸೆ ಹೋದವರು.
ಇ೦ದು ಕನ್ನಡವು ಮಲ್ಲಿಗೆಯ೦ತೆ ಅರಳಿ ತನ್ನ ಕ೦ಪನ್ನು ಎಲ್ಲೆಡೆಯು ವ್ಯಾಪಿಸಿದೆ. ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು.
ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ. ಕರ್ನಾಟಕದಲ್ಲಿ ಕನ್ನಡಿಗರೇ ಆದ್ಯತೆ.
ಅಕ್ಟೋಬರ್ ೩೧, ೨೦೦೮ ರಂದು ಭಾರತ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನ ನೀಡಿದೆ.
ಶಾಸ್ತ್ರೀಯ ಭಾಷೆಗೆ ಕನ್ನಡದಲ್ಲಿ “ಚೆನ್ನುಡಿ” ಎಂದೂ ಕರೆಯಬಹುದು.
ಇಷ್ಟೆಲ್ಲಾ ಇತಿಹಾಸ ಇರುವಂತಹ ಕನ್ನಡವನ್ನು ನವೇಂಬರ್'ನಲ್ಲಿ ಆಚರಿಸಿ ಕೊಲ್ಲೋದು ಎಷ್ಟರ ಮಟ್ಟಿಗೆ ಸರಿ ?
ಕನ್ನಡ ಜನಮನ ಧ್ವನಿಯಲ್ಲಿ ಒಂದಾಗ ಬೇಕು.
ನೀವು ಪರಭಾಷಿಕರಿಗೆ ಕನ್ನಡ ಕಲಿಸಿ .
ಕನ್ನಡ ಉಳಿವಿಗಾಗಿ ಹೋರಾಡುವ ಜನರಾದಂತಹ ನಾವುಗಳು ಮೊದಲು ಕನ್ನಡವನ್ನು ಮಾತನಾಡಬೇಕು.

ಜೈ ಹಿಂದ್ ವಂದೆ ಮಾತರಂ .
ಜೈ ಕರ್ನಾಟಕ ಮಾತೆ