ಭಾರತದಲ್ಲಿನ ಜಾತಿ ಪದ್ಧತಿ


ಪ್ರಾಚೀನ ಹಿಂದು ಗ್ರಂಥಗಳ ಪ್ರಕಾರ ಇಲ್ಲಿ ನಾಲ್ಕು "ವರ್ಣ"ಗಳಿವೆ. ಭಗವದ್ಗೀತೆ ಹೇಳುವಂತೆ ವರ್ಣಗಳನ್ನು ಗುಣ ಮತ್ತು ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮನುಸ್ಮೃತಿ ಮತ್ತು ಇನ್ನುಳಿದ ಶಾಸ್ತ್ರಗಳಲ್ಲಿ ನಾಲ್ಕು ವರ್ಣಗಳನ್ನು ಉಲ್ಲೇಖಿಸಲಾಗಿದೆ:ಬ್ರಾಹ್ಮಣರು (ಶಿಕ್ಷಕರು,ಪ್ರತಿಭಾವಂತರು ಮತ್ತು ಅರ್ಚಕರು),ಕ್ಷತ್ರಿಯರು (ರಾಜರು ಮತ್ತು ಯೋಧರು),ವೈಶ್ಯರು (ಕೃಷಿಕರು ಮತ್ತು ವ್ಯಾಪಾರಿಗಳು)ಮತ್ತು ಶೂದ್ರರು (ಕುಶಲ ಕಲೆಗಾರರು,ಸೇವಾಕರ್ತರು ಮತ್ತು ಕಾರ್ಮಿಕರು)

ಈ ಉಲ್ಲೇಖಿತ ಪದ್ದತಿಯು ವರ್ಣಗಳನ್ನು ಶ್ರೇಣೀಕರಿಸಿ ಅದನ್ನು ಮಾದರಿ ತಾರ್ಕಿಕ ಆಧಾರವನ್ನಾಗಿ ಪಡೆದು, ಸಾವಿರಾರು ಜಾತಿಗಳ ಆಧಾರಿತ ವಿವಾಹಗಳಿಗೆ ನಾಂದಿಯಾಗಿದೆ.ಇತಿಹಾಸದುದ್ದಕ್ಕೂ ಈ ವರ್ಣಗಳ ಮಿಶ್ರಣ ಮತ್ತು ವರ್ಣಸಂಕರ ದ ಬದಲಾವಣೆಗಳಿಗೆ ತನ್ನನ್ನು ತಾನು ಒಡ್ಡಿಕೊಂಡಿದೆ.ಇಲ್ಲಿ "ಶುದ್ಧ" ವರ್ಣಗಳ ವಿವರವೂ ಇದೆ. ಹಿಂದು ಸಮಾಜದ ನೀತಿ-ನಿಯಮಗಳಿಗೆ ಬದ್ದರಾಗಿಲ್ಲದ ವಿದೇಶಿಯರು,ಬುಡಕಟ್ಟಿನವರು ಮತ್ತು ಅಲೆಮಾರಿಗಳನ್ನು ಪರಕೀಯರು ಹಾಗು ಅಸ್ಪೃಶ್ಯರೆಂದು ಅದು ಪರಿಗಣಿಸುತ್ತದೆ. ಸಾಮಾಜಿಕ ಮುಖ್ಯವಾಹಿನಿಯಿಂದ ಹೊರಗಿರುವವರನ್ನು ಪರಜನ್ಯ(ನ) ಅಥವಾ ಅಂತ್ಯಜರು ಎನ್ನಲಾಗುವುದು. ಈ ಕೊನೆಯಲ್ಲಿನ ಅಸ್ಪೃಶ್ಯರ ಗುಂಪನ್ನು ದಲಿತರು ಎನ್ನುತ್ತಿದ್ದು ಇವರು ಶೂದ್ರರಲ್ಲಿಯೇ ಕೊನೆಯ ಸಾಲಿನವರು ಅಥವಾ ವರ್ಣ ಪದ್ದತಿಯಿಂದ ಹೊರಗಿರುವವರು ಎನ್ನಲಾಗುತ್ತದೆ. ಮನುಸ್ಮೃತಿಯ ಪ್ರಕಾರ ವರ್ಣ ಪದ್ದತಿಯು ಮೂಲತಃ ವಂಶಪಾರಂಪರಿಕವಾದುದಲ್ಲ.

ಹಲವಾರು ಹಿಂದುತ್ವದ ವಿಮರ್ಶಕರ ಪ್ರಕಾರ ಪ್ರಾಚೀನ ಹಿಂದು ಗ್ರಂಥಗಳಲ್ಲಿ ಸೂಚಿಸುರುವಂತೆ ಈ ಜಾತಿ ಪದ್ದತಿಯು ವರ್ಣ ಪದ್ದತಿಯಲ್ಲೇ ತನ್ನ ಬೇರುಗಳನ್ನು ಕಂಡುಕೊಂಡಿದೆ. ಹಲವಾರು ಗುಂಪುಗಳು ಅಂದರೆ ಇಸ್ಕಾನ್ ISKCONದಂತಹವುಗಳು ಆಧುನಿಕ (ಅಂತಾರಾಷ್ಟ್ರೀಯ ಶ್ರೀ ಕೃಷ್ಣ ಸಮಾಜ)ಭಾರತೀಯ ಜಾತಿ ಪದ್ದತಿ ಮತ್ತು ವರ್ಣ ಪದ್ದತಿಯನ್ನು ಎರಡು ಬೇರೆ ಬೇರೆ ಪರಿಕಲ್ಪನೆಗಳಾಗಿ ಪರಿಗಣಿಸುತ್ತದೆ. ವಸಾಹತು ಶಾಹಿಯ ಯುಗದ ಹಲವಾರು ಯುರೊಪಿಯನ್ ಆಡಳಿತಗಾರರು ಮನುಸ್ಮೃತಿಯನ್ನು ಹಿಂದುಗಳ "ಕಾನೂನು ಗ್ರಂಥ" ಎಂದು ತಪ್ಪಾಗಿ ಅರ್ಥೈಸಿದ್ದರು.ಇದರಿಂದಾಗಿ ಜಾತಿ ಪದ್ದತಿಯು ಒಂದು ಭಾಗವೆಂದು ಪರಿಗಣಿಸಲಾಗಿತ್ತು;ಆದರಿಂದು ಹಲವಾರು ವಿದ್ವಾಂಸರು,ಇದನ್ನು ಸಾಮಾಜಿಕ ಆಚರಣೆಯೇ ಹೊರತೇ ಧಾರ್ಮಿಕ ನಂಬುಗೆಯಲ್ಲ ಎಂದು ಪ್ರತಿಪಾದಿಸುತ್ತಾರೆ.. ಮನುಸ್ಮೃತಿಯು ವಿಶೇಷವಾಗಿ ಉತ್ತರ ಭಾರತದ ಬ್ರಾಹ್ಮಣರಿಗಾಗಿರುವ ಒಂದು ಉಲ್ಲೇಖನಾ ಕೃತಿ,ಪ್ರಮುಖವಾಗಿ ಬೆಂಗಾಲಿಗಳಿಗೆ,ಆದರೆ ಇದರ ಬಗ್ಗೆ ದಕ್ಷಿಣ ಭಾರತದಲ್ಲಿ ತಿಳಿವಳಿಕೆ ಕಡಿಮೆ.

ಆದರೆ ಹಲವಾರು ಹಿಂದು ಗ್ರಂಥ ಸೂಚಿಗಳ ಪ್ರಕಾರ ಜಾತಿ ಪದ್ದತಿಯು ಹಿಂದು ಧರ್ಮದ ಅನಿವಾರ್ಯ ಭಾಗವಲ್ಲ. ವೇದಗಳಲ್ಲಿ ಜಾತಿ ಪದ್ದತಿಗೆ ಮಹತ್ವವನ್ನೇ ನೀಡಿಲ್ಲ ಆದರೆ (ಪುರುಷ ಸೂಕ್ತ)ದಲ್ಲಿ ಸಾವಿರಾರು ಅಸಂಖ್ಯಾತ ಶ್ಲೋಕಗಳಲ್ಲಿ ಒಂದೇ ಒಂದು ಬಾರಿ ಪ್ರಸ್ತಾಪಿಸಲಾಗಿದೆ. ಹಲವಾರು ವೇದ ವಿದ್ವಾಂಸರ ಪ್ರಕಾರ ಇದರ ಪ್ರಸ್ತಾಪವು ಉಪವಿಷಯವಾಗಿದ್ದು ಮತ್ತು ಕೃತಕವೆಂದು ಹೇಳಿದ್ದಾರೆ;ಬಿ.ಆರ್ ಅಂಬೇಡ್ಕರ್ ಅವರೂ ಕೂಡ ವಿವರ ಅಧ್ಯಯನದ ಬಳಿಕ ಇದನ್ನೂ ಕೂಡಾ ಮಧ್ಯದಲ್ಲಿ ಸೇರಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಆದರೆ ವೇದದ ಕಾಲದಲ್ಲಿ ಯಾರಿಗೂ ಯಾರ ಬಗ್ಗೆ ನಿಷೇಧವಿರಲಿಲ್ಲ,ಶೂದ್ರರನ್ನೊಳಗೊಂಡಂತೆ ವೇದಗಳನ್ನು ಕೇಳಲು ಅಥವಾ ಯಾವುದೇ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಲು ಯಾವುದೇ ನಿಷಿದ್ದ ಇರಲಿಲ್ಲ.

ದಕ್ಷಿಣ ಭಾರತದಲ್ಲಿನ ಜಾತಿ ಪದ್ದತಿ ಬಗೆಗಿನ ಪುರಾವೆಎಂದರೆ,ಜಾರ್ಜ್ ಎಲ್ ಹಾರ್ಟ್ ಹೇಳಿಕೆಯಂತೆ "ಆರಂಭಿಕ ತಮಿಳು ಗ್ರಂಥಗಳಲ್ಲಿ ಕಾಣಿಸಿರುವಂತೆ ಅಲ್ಲಿ ಜಾತಿಯ ಅಸ್ತಿತ್ವ ಇದೆ;ಆದರೆ ಅಲ್ಲಿನ ಕಥೆಗಳ ಪ್ರಕಾರ ಬ್ರಾಹ್ಮಣರ ಮತ್ತು ಹಿಂದು ಕಟ್ಟುನಿಟ್ಟಿನ ಆಚರಣೆಗಳು" ಕಾಣುತ್ತವೆ. ಆತ ನಂಬುವಂತೆ ಜಾತಿ ಪದ್ದತಿಯ ಮೂಲವು "ಕೃಷಿಕ ನಾಗರಿಕತೆಯ ಅಭಿವೃದ್ಧಿಯೊಂದಿಗೆ ಈ ಪದ್ದತಿ ಬೆಳೆಯಿತು."ನಂತರ ಬ್ರಾಹ್ಮಣರ ಮತ್ತು ಬ್ರಾಹ್ಮಣ್ಯದ ಧಾರ್ಮಿಕತೆಗಳು ಅದನ್ನು ಪ್ರಭಾವಿಸಿದವು." ಆರಂಭಿಕ ತಮಿಳು ಗ್ರಂಥಗಳಲ್ಲಿ ಸಮಾನತೆಯ ಪರಿಕಲ್ಪನೆ ಇದೆ. ಸಂತ ವಲ್ಲುವರ್ ಅವರ ಪ್ರಕಾರ "ಪಿರಾಪೊಕ್ಕುಮ್ ಎಲ್ಲಾ ಉಯಿರ್ಕುಮ್ "ಅಂದರೆ ಹುಟ್ಟಿನಲ್ಲಿ ಎಲ್ಲರೂ ಸಮಾನರು." ಇದೇ ತೆರನಾಗಿ ಸಂತ ಔವೈಯಾರ್ ಕೂಡಾ ತಮ್ಮ ವಿಚಾರ ಮಂಡಿಸಿದ್ದಾರೆ. ಜಗತ್ತಿನಲ್ಲಿ ಎರಡೇ ಎರಡು ಜಾತಿಗಳಿವೆ,ಅವೆಂದರೆ ಸಮಾಜಕ್ಕೆ ಉತ್ತಮಕೊಡುಗೆ ನೀಡುವ ಮತ್ತು ಋಣಾತ್ಮಕವಾಗಿ ಕೊಡುಗೆ ನೀಡುವ ಎನ್ನಬಹುದು. ಈ ಹೇಳಿಕೆಗಳಿಂದ ನಾವು ತೀರ್ಮಾನಕ್ಕೆ ಬರುವುದೆಂದರೆ ಜಾತಿ ಪದ್ದತಿಯು ಒಂದು ಸಾಮಾಜಿಕ-ಆರ್ಥಿಕ ಶ್ರೇಣಿಯ ವರ್ಗೀಕರಣವಾಗಿದೆ.
ಸಾಂಪ್ರದಾಯಿಕವಾಗಿ ರಾಜಕೀಯ ಅಧಿಕಾರವು ಕ್ಷತ್ರಿಯರ ಕೈಯಲ್ಲಿತ್ತು,ಇತಿಹಾಸಕಾರರ ಪ್ರಕಾರ ಬ್ರಾಹ್ಮಣರು ಇದರ ರಕ್ಷಾಕವಚವಾಗಿದ್ದಾರೆ.ಅವರು ಧರ್ಮವನ್ನು ಅರ್ಥೈಸುವ ಕಾರ್ಯ ವೃತ್ತಿಯಿಂದ ಸಮಾಜದಲ್ಲಿ ಹೆಚ್ಚು ಸ್ಥಾನ-ಮಾನ ಪಡೆದವರಾಗಿದ್ದಾರೆ.

ಚೀನಾದ ಬೌದ್ದ ಮತದ ಫಾ ಹಿಯನ್ ಎಂಬ ಧರ್ಮಯಾತ್ರಿಕ ಸುಮಾರು 400 AD ಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ."ಆತ ಬಹು ಸಂಖ್ಯಾತ ಬಹಿಷ್ಕೃತ ಚಾಂಡಾಲಗಳ ವರ್ಗವನ್ನು ಕಂಡ,ಅವರು ತಮ್ಮ ಕೆಲಸಗಳಿಂದಾಗಿ ಸ್ಥಾನಮಾನಗಳಿಂದ ವಂಚಿತರಾದವರು.ಶವ ಸಾಗಿಸುವಂತಹ ಕೆಲಸಗಳನ್ನು ಅವರು ಮಾಡುತ್ತಿದ್ದರಿಂದ ಅವರನ್ನು ಸಾಮಾಜಿಕವಾಗಿ ಸಾರ್ವತ್ರಿಕವಾಗಿ ದೂರಿಡಲಾಗಿತ್ತು... ಆದರೆ ಸಮಾಜದ ಇತರ ಸ್ತರದ ಜನರಲ್ಲಿ ಯಾವ ಕುಂದು ಇತ್ತೆಂಬುದನ್ನು ಆತ ಗುರುತಿಸಲು ಅಸಮರ್ಥನಾದ.ಇದಲ್ಲದೇ ಇನ್ಯಾವದೇ ತುಳಿತಕ್ಕೊಳಗಾದ 'ಜಾತಿ ಪದ್ದತಿ'ಯ ಜನಾಂಗ ಆ ಯಾತ್ರಿಯ ಕಣ್ಣಿಗೆ ಬೀಳದಿದ್ದುದು ಆಶ್ಚರ್ಯಕರ ವಿಷಯ.. ಈ ಅವಧಿಯಲ್ಲಿ ಶೂದ್ರ ಮತ್ತು ಬ್ರಾಹ್ಮಣಮೂಲದವರೂ ರಾಜರಾಗಿದ್ದರು,ಇದು ಕ್ಷತ್ರಿಯವರ್ಣದವರದಾದರೂ ಆಗ ಒಟ್ಟಾರೆ ಜಾತಿ ಪದ್ದತಿ ನಿಷೇಧವಾಗಿರಲಿಲ್ಲ ಅಲ್ಲದೇ ದಮನಕಾರಿಯಾಗಿರಲಿಲ್ಲ.

ಜಾತಿ ಪದ್ದತಿಯು ವೃತ್ತಿಪರತೆಯ ಮೇಲೆ ನಿರ್ಧಾರವಾಗಲಾರದು ಅಥವಾ ಸಾಮಾಜಿಕ ಗುಂಪಿನ ಸ್ಥಾನಮಾನವನ್ನು ಪಡೆಯಲಾರದು. ಬ್ರಿಟಿಶ್ ಸಮಾಜ ಹೇಗೆ ವರ್ಗಗಳ ಆಧಾರದ ಮೇಲೆ ವಿಭಜನೆಗೊಂಡಿತೋ ಹಾಗೆಯೇ ಬ್ರಿಟಿಶರು ತಮ್ಮ ಅನುಕೂಲಕ್ಕಾಗಿ ಭಾರತದ ಜಾತಿ ಪದ್ದತಿಯನ್ನು ವಿಭಜಿಸಲು ಯೋಚಿಸಿದರು. ಜಾತಿಯು ವೃತ್ತಿಯ ಸೂಚಕವಾಗಿದೆ ಎಂದು ಅವರು ಕಂಡುಕೊಂಡರು. ಸಮಾಜದ ಸ್ಥಾನ-ಮಾನ ಮತ್ತು ಬುದ್ದಿಮತ್ತೆಯ ಸಾಮರ್ಥ್ಯವನ್ನು ಅವರು ಮನಗಂಡರು. ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ ಬ್ರಿಟಿಶ್ ರಾಜ್ ಕಾಲದಲ್ಲಿ ಜಾತಿ ಪದ್ದತಿಯು ಬಹಳಷ್ಟು ಕಠಿಣವಾಗಿತ್ತು.ಯಾವಾಗ ಬ್ರಿಟಿಶ್ ರು ಹತ್ತು ವರ್ಷಗಳ ಜನಗಣತಿ ಮಾಡಿದರೋ ಆಗ ಈ ಜಾತಿಗಳ ಬಗ್ಗೆ ಒಂದು ಸಂಹಿತೆಯನ್ನು ತಮ್ಮ ಆಡಳಿತಕ್ಕೆ ಅನುಕೂಲವಾಗುವಂತೆ ಬದಲಿಸಿದರು.ಹರಿಜನರು ಅಥವಾ ಜಾತಿ ಪದ್ದತಿಯಿಂದ ಹೊರಗಿದ್ದ ಜನರು ಸಮಾಜದಲ್ಲಿ ಅತ್ಯಂತ ಕೀಳು ದರ್ಜೆಯನ್ನು ಪಡೆದಿದ್ದರು. ಆರಂಭದಲ್ಲಿ ಹರಿಜನರನ್ನು ಅಸ್ಪೃಶ್ಯರು ಎಂದು ಕೆಲವರು ಉಲ್ಲೇಖಿಸುತ್ತಿದ್ದರು.ಇವರು ಅನಾರೋಗ್ಯ ವಾತಾವರಣದಲ್ಲಿ ಅಥವಾ ಮಾಲಿನ್ತ್ಯದ ಕೆಲಸಗಳನ್ನು ಮಾಡುತ್ತಿದ್ದರು. ಈ ಹಿಂದೆ ಹರಿಜನರು ಸಾಮಾಜಿಕ ವಿಭಜನೆ ಮತ್ತು ನಿರ್ಭಂದಗಳಿಂದ ಬಹಳಷ್ಟು ತೊಂದರೆ ಅನುಭವಿಸಿದರು;ಇದರೊಂದಿಗೆ ಬಡತನವೂ ಅವರಿಗೆ ಶತ್ರುವಾಗಿತ್ತು. ಅವರಿಗೆ ದೇವಸ್ಥಾನಗಳಲ್ಲಿ ಇತರರೊಂದಿಗೆ ಪೂಜೆ ಮಾಡಲು ಬಿಡುತ್ತಿರಲಿಲ್ಲ ಅಲ್ಲದೇ ಸಾರ್ವಜನಿಕವಾಗಿ ನೀರು ಕೂಡಾ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ. ಉನ್ನತ ಜಾತಿಯವರು ಇವರೊಂದಿಗೆ ಮಾತನಾಡುತ್ತಿರಲಿಲ್ಲ. ಉನ್ನತ ಜಾತಿಯವನೊಬ್ಬ ಇವರೊಂದಿಗೆ ಶಾರೀರಿಕ ಅಥವಾ ಸಾಮಾಜಿಕ ಸಂಪರ್ಕಕ್ಕೆ ಬಂದರೆ ಆತ ಅಥವಾ ಆಕೆ ಮೈಲಿಗೆಯಾದಂತೆ ಮತ್ತು ಸ್ವಚ್ಚವಾಗಿ ಸ್ನಾನ ಮಾಡಿ ಶುದ್ದೀಕರಿಸಬೇಕು ಇದಲ್ಲದೇ ಹರಿಜನರಲ್ಲಿಯೂ ಸಾಮಾಜಿಕ ತಾರತಮ್ಯಗಳು ಬೆಳೆದವು;ಉಪಜಾತಿಗಳು ಅದರಲ್ಲಿ ಧೋಬಿ ಮತ್ತು ನಾಯಿದ ರು(ಸವಿತಾ ಸಮಾಜ) ಇತರ ಕೀಳು ಅಂದರೆ ಭಂಗಿಗಳ ಜಾತಿಯವರೊಂದಿಗೆ ಮಾತನಾಡುತ್ತಿರಲಿಲ್ಲ.ಇವರು ಹರಿಜನರಲ್ಲಿಯೇ "ಅತ್ಯಂತ ಕೀಳು ಎಂದು ಪರಿಗಣಿಸಲಾಗುತಿತ್ತು".ಸಮಾಜವಿಜ್ಞಾನಿಗಳು ಇದರ ಬಗ್ಗೆ ಹಲವಾರು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ನೀಡಿದ್ದಾರೆ,ಸಾಮಾಜಿಕ ಅತ್ಯಂತ ಕಟ್ಟಳೆಬದ್ದ ನಿಯಮಗಳ ಬಗ್ಗೆ ಅದರ ದೋಷಗಳ ಬಗ್ಗೆಯೂ ವ್ಯಾಖ್ಯಾನಿಸಿದ್ದಾರೆ. ಆದರೆ ಜಾತಿ ಪದ್ದತಿಯು ಆಯಾ ಕಾಲದಲ್ಲಿ ತನ್ನ ಪ್ರಭಾವ ತೋರಿದ್ದಲ್ಲದೇ ಸಮಾಜದಲ್ಲಿ ಜಾತಿ ಪದ್ದತಿಯನ್ನು ಪರಸ್ಪರ ಒಪ್ಪಿಗೆ ಇಲ್ಲದೇ ಈ ಜಾತಿ ಆಧಾರ ಪರಿಗಣಿಸಿ ಮಾಡಲಾಗುತಿತ್ತು;ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸುವಿಕೆ,ಆರ್ಥಿಕ ಸ್ಥಿತಿ,ಸಂಬಂಧಗಳ ಕುರಿತ ವಿಚಾರಗಳು ಉಪಜಾತಿಗಳ ಮಟ್ಟದಲ್ಲಿ ಚರ್ಚೆಗೆ ಬರುತ್ತಿದ್ದವು,ಯಾವ ವ್ಯಕ್ತಿ ಯಾವ ಜಾತಿಯಲ್ಲಿ ಜನಿಸಿದ ಮತ್ತು ಯಾವ ಜನಾಂಗದ ಸಾಮಾಜಿಕ ಸಂಬಂಧ ಪಡೆದ ಎಂಬುದು ಆತನ ಬದುಕಿನ ಪರ್ಯಂತ ಇರುವ ವಿಷಯವಾಗಿತ್ತು.ಅಂತರ್ಜಾತೀಯ ಮತ್ತು ಅಂತರ್ದರ್ಮೀಯ ಸಂಬಂಧಗಳ ಬಗ್ಗೆ ಅಸಮಾನತೆ ಮತ್ತು ಕಾಲಾನುಕ್ರಮಕ್ಕಾಗುವ ಬದಲಾವಣೆಗಳು ಈ ನಿಟ್ಟಿನಲ್ಲಿ ತಮ್ಮ ಪ್ರಭಾವ ಬೀರುತ್ತವೆ. ನಿಶ್ಚಿತವಾಗಿ ವ್ಯಾಖ್ಯಾನಿಸಲ್ಪಟ್ಟ ಈ ಪದ್ದತಿಯು ಪರಸ್ಪರ ಅವಲಂಬನೆಯು ಸಮೂದಾಯದ ಒಟ್ಟಾರ್ಥದಲ್ಲಿ ಒಂದು ಭದ್ರತೆಯನ್ನು ನೀಡುತ್ತದೆ. ಅದಲ್ಲದೇ ಶ್ರಮಿಕ ವರ್ಗದ ವಿಭಜನೆ ನಂತರ ಆಯಾ ಪದ್ದತಿಯ ಆಧಾರ ಮೂಲದ ಮೇಲೆ ವಲಸೆಗಾರರು ಮತ್ತು ವಿದೇಶಿಯರು ತಮ್ಮ ತಮ್ಮ ಜಾತಿಗಳಿಗೆ ಅಂಟಿಕೊಂಡರು. ಆರ್ಥಿಕ ಚಟುವಟಿಕೆಗಳನ್ನು ಬಹುಮಟ್ಟಿಗೆ ಜಾತಿ ಪದ್ದತಿಯು ತನ್ನ ಪ್ರಭಾವದಿಂದ ಆವರಿಸಿದೆ,ಇದು ಯುರೊಪಿಯನ್ ನ ಮಧ್ಯಮ ಕೂಟಗಳನ್ನು ನಿರ್ಮಿಸಲು ಸಾಧ್ಯವಾಗಿಸಿತು.ಈ ಮೂಲಕ ಶ್ರಮಿಕ ವರ್ಗೀಕರಣಕ್ಕೆ ದಾರಿಯಾಯಿತು.ಕುಶಲ ಕೆಲಸಗಳಿಗಾಗಿ ತರಬೇತಿ,ತಾಂತ್ರಿಕ ಸಹಾಯ ಅಲ್ಲದೇ ಇನ್ನಿತರ ಉತ್ಪಾದನಾ ಕೆಲಸಗಳಿಗೆ ನಿಗದಿತ ತರಬೇತನ್ನು ನೀಡಲಾಯಿತು. ಉದಾಹರಣೆಗೆ ಕೆಲವು ಪ್ರದೇಶಗಳಲ್ಲಿ ಇಂತಹ ಉಪಜಾತಿಯ ಜನಾಂಗ ಅತ್ಯುತ್ತಮ ನೇಯ್ಗೆಯ ಬಟ್ಟೆ ತಯಾರಿಸುತ್ತಾರೆ. ಇನ್ನೂ ಹೆಚ್ಚೆಂದರೆ ಕೆಲವು ತತ್ವಶಾಸ್ತ್ರಜ್ಞರ ಪ್ರಕಾರ ಬಹಳಷ್ಟು ಜನರು ತಮ್ಮ ಗುಂಪಿನಲ್ಲಿನ ಸಗೋತ್ರ ವಿವಾಹ ಹಾಗು ಇನ್ನಿತರ ಶ್ರೇಣೀಕೃತ ವ್ಯವಸ್ಥೆಯಲ್ಲಿ ಆರಾಮವಾಗಿರುತ್ತಾರೆ.ಅವರು ಈ ಮೊದಲು ಪ್ರಾಚೀನ ಯುಗದಲ್ಲಿ ಹೇಗಿದ್ದರೋ ಈಗಲೂ ಹಾಗೆಯೇ ಮುಂದುವರಿಯಲು ಇಷ್ಟಪಡುತ್ತಾರೆ.
ಈ ಜಾತಿ ಪದ್ದತಿಗೆ  ಬುದ್ದ ಬುದ್ದಬುದ್ದ,ಮಹಾವೀರ ಮತ್ತು ಗೊಸಾಲಾ ಮಸ್ಕರಿನ್ ನ ಕಾಲದಿಂದಲೂ ಒಂದು ಸವಾಲನ್ನು ಎದುರಿಸಬೇಕಾಯಿತು.ಇದರಲ್ಲಿ ವರ್ಣ ಪದ್ದತಿಗೆ ಯೋಗ ಉಪನಿಶಿತ್ ಗಳಲ್ಲಿ ಅಷ್ಟಾಗಿ ಬೆಂಬಲ ದೊರಕಿಲ್ಲ,ಇದು ಚೀನಾ-ಆಕಾರದ(ಕ್ರಾಂತಿ) ತಂತ್ರಗಾರಿಕೆಗೆ ನಿರಂತರವಾಗಿ ತನ್ನ ಲಕ್ಷಣ ತೋರಿದೆ.ಇದು ಚೀನಾದ ಕ್ರಾಂತಿ ಆಸಾಮ್ ನಲ್ಲಿ ಪ್ರಾರಂಭಗೊಂಡದ್ದನ್ನು ಸೂಚಿಸುತ್ತದೆ.ಇದು ಬಹುತೇಕ ಮಧ್ಯಯುಗದಲ್ಲಿ ಕಾಣಸಿಗುತ್ತದೆ. ನಾಥ ಭಕ್ತಿ ಪಂಥವು ಮತ್ಸ್ಯ-ಇಂದ್ರ ನಾಥ ಮತ್ತು ಗೊ-ರಕ್ಷಾ ನಾಥ ಪಂಥದಿಂದ ಅದೇ ಯುಗದಲ್ಲಿ ಹುಟ್ಟಿಕೊಂಡಿತು.ಇದು ನಂತರದ ಅವಧಿಯಲ್ಲಿ ದೇಶಾದ್ಯಂತ ಹಬ್ಬಿತಲ್ಲದೇ ವರ್ಣ ಪದ್ದತಿಗೆ ತೀವ್ರ ವಿರೋಧ ವ್ಯಕ್ತಪಡಿಸಿತು.ಹಲವಾರು ಭಕ್ತಿ ಪಂಥದ ಕಾಲದ ಸಂತರು ಈ ಜಾತಿ ತಾರತಮ್ಯವನ್ನು ನಿರಾಕರಿಸಿದರಲ್ಲದೇ ಅಸ್ಪೃಶ್ಯರನ್ನೊಳಗೊಂಡಂತೆ ಎಲ್ಲರನ್ನೂ ತಮ್ಮ ವಲಯದೊಳಗೆ ಸೇರಿಸಿಕೊಂಡರು. ಇದು ಬ್ರಿಟಿಶ್ ರಾಜ್ ಕಾಲದಲ್ಲಿ ಹೊಸ ಆಯಾಮ ಪಡೆದು ಹಲವಾರು ಹಿಂದು ಸುಧಾರಣೆ ಕ್ರಾಂತಿಗಳುಕಾಣಿಸಿದವು;ಉದಾಹರಣೆಗೆ ಬ್ರಹ್ಮೊ ಸಮಾಜ ಮತ್ತು ಆರ್ಯ ಸಮಾಜದಂತಹುಗಳು ಈ ಜಾತಿ ಪದ್ದತಿಗೆ ಕೊನೆ ಹಾಡಲು ಯತ್ನಿಸಿದವು. ಅಸ್ಪೃಶ್ಯರು ಎಂದು ಹೇಳಲಾಗುವವರನ್ನು ಮುಖ್ಯವಾಹಿನಿಗೆ ಸೇರಿಸುವ ಈ ಚಳವಳಿಗಳು ಹಲವಾರು ಸುಧಾರಣಾ ವಾದಿಗಳಿಂದ ಟೀಕೆ,ವಿಮರ್ಶೆಗೆ ಒಳಗಾದವು.(ಇದಕ್ಕಾಗಿ ನೋಡಿಐತಿಹಾಸಿಕ ವಿಮರ್ಶೆ,ಕೆಳಗಿರುವಂತೆ,) ಮಹಾತ್ಮಾ ಗಾಂಧಿಇವರನ್ನು "ಹರಿಜನರು"(ದೇವರ ಮಕ್ಕಳು)ಎಂದು ಕರೆದರು,ಸದ್ಯ ಆ ಪದವು ಒಂದು ಪ್ರೊತ್ಸಾಹಕರ,ಪೋಷಕ ಎಂದು ಪರಿಗಣಿಸಲಾಯಿತು.ಸದ್ಯ ದಲಿತ(ತುಳಿತಕ್ಕೊಳಗಾದ ) ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಗಾಂಧಿಯವರ ಈ ಕೊಡುಗೆಯು ಅಸ್ಪೃಶ್ಯರ ಬಗೆಗಿರುವ ಕಾಳಜಿ ಬಗ್ಗೆ ಇನ್ನೂ ಚರ್ಚೆಗೆ ಒಳಗಾಗುತ್ತಿದೆ,ಬಹುಮುಖ್ಯವಾಗಿ ಅವರ ಸಮಕಾಲೀನ ಡಾ.ಬಿ.ಆರ್ ಅಂಬೇಡ್ಕರ್ ಅವರ ವಾದವು ಗಾಂಧಿಯವರು ಅಸ್ಪೃಶ್ಯರಿಗಾಗಿ ಮಾಡಿದ ಚಟುವಟಿಕೆಗಳು ತಮ್ಮ ಈ ಜನರನ್ನು ಮೇಲೆತ್ತಲು ಅಷ್ಟಾಗಿ ಕೆಲಸ ಮಾಡಿಲ್ಲ ಎಂಬ ವಾದವೂ ಇದೆ.
ಸ್ವತಂತ್ರ ಭಾರತವು ಬಹಳಷ್ಟು ದ್ವೇಷದ ಅಪರಾಧಗಳನ್ನು ಜಾತಿಯಿಂದಾಗಿ ಮಾಡಲಾಗಿರುವುದನ್ನು ಕಂಡಿದೆ. ಹಲವಾರು ಹಿಂಸಾಚಾರಗಳು ದಲಿತರ ವಿರುದ್ದ ನಡೆದಿದ್ದು ಉದಾಹರಣೆಗೆ ಖೆರಲಾಂಜಿ ನರಮೇಧ ಪ್ರಕರಣಗಳಂತವು ಭಾರತದ ಹಲವು ಭಾಗಗಳಿಂದ ವರದಿಯಾಗಿವೆ. ದಲಿತರಿಂದ ಕೂಡಾ ಹಲವಾರು ಹಿಂಸಾತ್ಮಕ ಪ್ರತಿಭಟನೆಗಳು 2006 ರ ಮಹಾರಾಷ್ಟ್ರದಲ್ಲಿನ ದಲಿತರ ಪ್ರತಿಭಟನೆಗಳು ವರದಿಯಾಗಿವೆ.ತನ್ನಷ್ಟಕ್ಕೆ ತಾನೇ ಅಗ್ರ ಜಾತಿ ಎಂದು ಭಾವಿಸುವ ಬಿಹಾರದ ರಣ್ ವೀರ್ ಸೇನಾವು ತನ್ನ ಸೈನಿಕರೊಂದಿಗೆ ಸೇರಿ ದಲಿತರ ಮತ್ತು ಇನ್ನಿತರ ಪರಿಶಿಷ್ಟ ಜಾತಿಗಳ ವಿರುದ್ದ ಹಿಂಸಾತ್ಮಕ ದಾಳಿ ಮಾಡಿದ್ದನ್ನು ನೆನಪಿಸಬಹುದು.

ಫೂಲನ್ ದೇವಿ ಕೂಡಾ ಮಲ್ಹಾ ಎಂಬ ಕೀಳು ಜಾತಿಗೆ ಸೇರಿದ್ದವಳೆಂದು ಅವಳ ಮೇಲೆ ಮೇಲ್ಜಾತಿಯವರೆಂದು ಹೇಳಿಕೊಳ್ಳುವ ಠಾಕುರಗಳು ಆಕೆಯ ಯುವತಿಯಾಗಿದ್ದಾಗ ಅವಳ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆಯಿತು. ನಂತರ ಆಕೆ ದರೋಡೆಕೋರಳಾಗಿ ಮಾರ್ಪಟ್ಟು ಮೇಲ್ಜಾತಿಯವರ ಮೇಲೆ ತನ್ನ ಕೃತ್ಯವನ್ನು ಎಸಗಿದಳು. ಅದೇ 1981 ರ ಸುಮಾರಿಗೆ ಆಕೆಯ ತಂಡ ಇಪ್ಪತ್ತೆರಡು ಠಾಕುರ್ ಗಳನ್ನು ಹತ್ಯೆ ಮಾಡಿತು,ಆದರೆ ಇವರಾರೂ ಅವಳ ಅತ್ಯಾಚಾರ ಅಥವಾ ಅಪಹರಣದ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ನಂತರ ಆಕೆ ರಾಜಕಾರಣಿಯಾದಳಲ್ಲದೇ ಸಂಸತ್ ಸದಸ್ಯಳಾಗಿ ಆಯ್ಕೆಯಾಗಿದ್ದಳು.