ಕರ್ನಾಟಕ ಧ್ವಜವನ್ನು ರಾಜಕೀಯ ದಾಳವಾಗಿಸದೆ ಅದನ್ನು ಅಧಿಕೃತಗೊಳಿಸಲು ಪ್ರಯತ್ನಪಡಿ

ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.ಇ
ವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.ಕನ್ನಡ ಧ್ವಜ ಯಾವುದೇ ಅಧಿಕೃತ ಸ್ಥಾನಮಾನ ಹೊಂದಿಲ್ಲ. ಈ ಧ್ವಜವನ್ನು ೧೯೬೫ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತ್ತು.ಆದರೆ ಧ್ವಜವನ್ನು ಕರ್ನಾಟಕದ ಎಲ್ಲಡೆ ಸ್ಥಿರವಾಗಿ ಕರ್ನಾಟಕ ಮತ್ತು ಕನ್ನಡ ಪ್ರತಿನಿಧಿಸಲು ಬಳಸಲಾಗುತ್ತಿದೆ. ಈ ಧ್ವಜವನ್ನು ನವೆಂಬರ್ ಒಂದರಂದು, ಕನ್ನಡ/ಕರ್ನಾಟಕ ರಾಜೋತ್ಸವದಸಂದರ್ಭದಲ್ಲಿ ಕರ್ನಾಟಕದ ಪ್ರತಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ, ಕರ್ನಾಟಕದ ನಾಡ ಗೀತೆಯಾದ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆಹಾಡನ್ನು ಹಾಡಲಾಗುತ್ತದೆ.
ಕನ್ನಡ ಧ್ವಜವನ್ನು ಕರ್ನಾಟಕದ ಎಲ್ಲಾ ಕರ್ನಾಟಕ ಸರ್ಕಾರದ ಕಟ್ಟಡಗಳ ಮೇಲೆ, ಭಾರತದ ಧ್ವಜದ ಜೊತೆ, ಭಾರತದ ಧ್ವಜಕ್ಕಿಂತ ಸ್ವಲ್ಪ ಕೆಳ ಭಾಗದಲ್ಲಿ ಹಾರಡುತ್ತಿರುವುದನ್ನು ನೋಡಬಹುದು. ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಸರ್ಕಾರದ ಕಟ್ಟಡಗಳ ಮೇಲೆ ಕರ್ನಾಟಕದ ಧ್ವಜ ಹಾರಿಸಬಾರದು ಎಂಬ ನಿರ್ಬಂಧನೆ ಹೇರಿದ್ದ ಸುತ್ತೋಲೆಯನ್ನು, ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರಿಂದ ವಾಪಸ್ಸು ತೆಗೆದುಕೊಂಡರು.
ಈ ಯಡಿಯೂಪ್ಪನವರ ಒಂದು ಹೇಳಿಕೆಗೆ ಬಿಜೇಪಿಯವರು ಸಹ ವಿರೋಧ ವ್ಯಕ್ತಪಡಿಸಿದ್ದರು!!
ಇದನ್ನೆ ರಾಜಕೀಯ ದಾಳವಾಗಿಸಿಕೊಂಡು ಬಿಜೇಪಿ ವಿರುದ್ಧ ಕಾಂಗ್ರೇಸ್ ಸರ್ಕಾರ ಕನ್ನಡಿಗರನ್ನು ಎತ್ತಿಕಟ್ಟುವಲ್ಲಿ ಸಫಲವಾಯಿತು.
ಆದರೆ ಕರ್ನಾಟಕದ ಧ್ವಜ ಅಧಿಕೃತವಾಗಬೇಕು ಎಂಬುದು ಕನ್ನಡಪರ ಸಂಘಟನೆಯ ಆಶಯ.