ವ್ಯಾಪಾರ ವೃತ್ತಿಗೆ ಹಲವಾರು ವೇದಿಕೆಗಳಿವೆ.
ಮತ್ತು ಎರಡು ವಿಧಗಳು.
ಒಂದನೆಯದು
ಅನುಭವಸ್ಥ ವ್ಯಕ್ತಿಯು ದೊಡ್ಡ ಪ್ರಮಾಣದ ಬಂಡವಾಳ ಹೂಡಿ ವ್ಯಾಪಾರ ಆರಂಭಿಸುತ್ತಾನೆ.
ಎರಡನೆಯದು
ಇತರರ ಅನುಭವ ಮತ್ತು ಸಲಹೆ ಕೇಳಿ ವ್ಯಾಪಾರ ಕ್ಷೇತ್ರದಲ್ಲಿ ಧುಮುಕುತ್ತಾರೆ..
ಈ ಎರಡನೆ ತರಹದ ವ್ಯಾಪಾರಿಗಳಲ್ಲಿ ನಷ್ಟಗಳು ಜಾಸ್ತಿ ಅದಕ್ಕೆ ಕಾರಣ ಹಲವು.
ಇತರರ ಮಾತು ಕೇಳಿ ಹಣಹೂಡಿಕೆ ಮಾಡಿ ಸ್ವಂತ ವ್ಯಾಪಾರ ಆರಂಭಿಸುವುದು.
ಕೈಗಾರಿಕಾವಲಯದಂತ ಊರುಗಳಲ್ಲಿ ಬಟ್ಟೆಯಂಗಡಿ ಹಾಕುವುದು.
ಅತಿ ಕಡಿಮೆ ಜನ ಇರುವ ಹಳ್ಳಿಗಳಲ್ಲಿ ಮೊಬೈಲ್ ಕಂಪ್ಯೂಟರ್ ಮಾರಾಟದಂತಹ ಅಂಗಡಿಗಳನ್ನು ತೆರೆಯುವುದು ನಷ್ಟ ಅಥವ ಅತೀ ಕಡಿಮೆ ಲಾಭಕ್ಕೆ ಗುರಿಯಾಗುತ್ತವೆ..
ಸಣ್ಣ ಉದ್ಯಮಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ನೆಡಸಿದರೆ ಸಣ್ಣ ಅವಧಿಯಲ್ಲಿ ಉತ್ತಮ ಲಾಭಗಳಿಸಬಹುದು.
ಉದಾಹರಣೆಗೆ.
ಉದ್ಯಾನವನ , ಶಾಲೆ ಕಾಲೇಜಿನ ಬಳಿ ಪಾನಿಪುರಿಯ ಸುಸಜ್ಜಿತ ಅಂಗಡಿ ಮತ್ತು ಜ್ಯೂಸ್ ಸೆಂಟರ್'ಗಳು
ಕೈಗಾರಿಕಾವಲಯದ ಪ್ರದೇಶಗಳಲ್ಲಿ ಸಣ್ಣಪುಟ್ಟ ಬಿಡಿಭಾಗಗಳ ಅಂಗಡಿ ಮತ್ತು ಹೊಟೇಲ್ ಹಾಕಬಹುದು.(ಇಡ್ಲಿ ವಡೆಯಂತಹ ತಿಂಡಿಗಳಿಗೆ ಬೇಡಿಕೆ) ಆದರೆ ಸಾಲ ಕೊಡುವ ಪದ್ಧತಿ ಅಲ್ಲಿ ನೆಡೆಯಬಾರದು. ಅವರು ಕೊಡುವ ತಿಂಗಳಹಣ ನಿಮಗೆ ಬಂಡವಾಳಕ್ಕೆ ಧಕ್ಕೆ ತರುತ್ತದೆ.
ಒಂದೆರಡು ವರ್ಷಗಳ ನಂತರ ನಂಬಿಕಸ್ತ ಜನರಲ್ಲಿ ಆ ರೀತಿ ಮಾಡಬಹುದು.
ಮೊಲ ಸಾಕಣೆಯೂ ಉತ್ತಮ ಉದ್ಯಮ ಈ ಹಿಂದೆ ವಿವರಣೆ ನೀಡಿದ್ದೆನೆ.
ಪ್ರತಿದಿನ ಬಳಕೆಯ ವಸ್ತುಗಳಾದ ಹಾಲಿನಂತ ಉತ್ಪನ್ನಗಳು ಮಾರಾಟ ಮಾಡಲು ಉತ್ತಮ.
ಜನವಸತಿ ಪ್ರದೇಶ ಮಾರುಕಟ್ಟೆಯಂತಹ ಪ್ರದೇಶದಲ್ಲಿ ಯಾವುದಾದರು ಚಿಕ್ಕ ವ್ಯಾಪಾರ ಆರಂಭಿಸಿದರು ಉತ್ತಮ ಲಾಭಗಳಿಸಬಹುದು.
ಇಷ್ಟು ನನಗೆ ಗೊತ್ತಿರುವ ಮಾಹಿತಿ.
ನಿಮಗೆ ಇನ್ನು ಹೆಚ್ಚು ಗೊತ್ತಿದ್ದರೆ email ಮುಖಾಂತರ ಮಾಹಿತಿ ಹಂಚಿಕೊಳ್ಳಿ.
✏ಸುಹಾಸಿನಿ ದೇಸಾಯಿ.

