ಹಂಪಿಯ ಮಹಾನವಮಿ ದಿಬ್ಬದ ಬಗ್ಗೆ ನಿಮಗೆಷ್ಟು ಗೊತ್ತು!!

ಹಂಪಿಯ ಗತವೈಭವ ಅಳೆಸಿದರು ಕನ್ನಡಿಗರು ಅದನ್ನು ವೈಭವಯುತವಾಗಿ ಸಂರಕ್ಷಿಸಿ ಅದಕ್ಕೆ ಸಿಗಬೇಕಾದ ಎಲ್ಲ ಪೂಜೇಗಳನ್ನು ಮರಳಿ ತರಬೇಕಿದೆ.
ಸರ್ಕಾರಕ್ಕೆ ಇದು ಕೇವಲ ಒಂದು ಪ್ರವಾಸೋದ್ಯಮದಿಂದ ಹಣಗಳಿಸಲು ಇರುವ 
ಮಾರ್ಗ ಮಾತ್ರ ಕಾಣುತ್ತಿದೆ.
ಈ ವರ್ಷ ಬಿಡುಗಡೆಯಾದ ಹೊಸ ನೋಟಿನ ಮೇಲಿರುವ ಹಂಪಿ ರಥದ ಚಿತ್ರದಿಂಧ ಅದು ದೇಶದ ಮೂಲೆಮೂಲೆಗಳಲ್ಲಿ ತಲುಪಿದಾಗ ಜನರ ಆಸಕ್ತಿ ಕರ್ನಾಟಕ ಪ್ರವಾಸಕ್ಕೆ ಎಳೆತರಬಹುದು. ಆದರೆ ಪ್ರವಾಸಿಗರಿಗೆ ಇದೇನಾ ಹಂಪಿ ಎಂದು ಅನಿಸಬಾರದು..
ಬನ್ನಿ ಹಂಪಿಯ ಮಹಾನವಮಿ ದಿಬ್ಬದ ಬಗ್ಗೆ ಸ್ವಲ್ಪ ತಿಳಿಯೋಣ

ವಿಜಯನಗರ ಅರಸರ ಕಾಲದ ಹಂಪಿಯೇ ನಾಡಹಬ್ಬ ಮೆಸೂರು ದಸರಾಗೆ ಪ್ರೇರಣೆ ನೀಡಿದ ನೆಲ. ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದರೂ ವಿಶ್ವವಿಖ್ಯಾತ ಹಂಪಿಯಲ್ಲಿ ಸಂಭ್ರಮ ಇಲ್ಲ. ವೈಭವಕ್ಕೆ ನೆಲೆಯಾಗಬೇಕಿದ್ದ ಮಹಾನವಮಿ ದಿಬ್ಬ ಕೇಳುವವರಿಲ್ಲದೇ ಬಿಕೋ ಎನ್ನುತ್ತಿದೆ.
ವಿಶ್ವವಿಖ್ಯಾತ ನಾಡಿನ ಐತಿಹಾಸಿಕ ಕುರುಹುಗಳು ದಸರಾ ವೈಭವವನ್ನು ಹೇಳುತ್ತಿದ್ದು, ಆಧುನಿಕ ದಿನಮಾನಗಳಲ್ಲಿ ಹಿಂದಿನ ಸಂಭ್ರವ ಮರೆಯಾಗಿದೆ. ವಿಜಯನಗರ ಅರಸರು ವೈಭವದಿಂದ ದಸರಾ ಆಚರಿಸುತ್ತಿದ್ದರೂ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಐತಿಹಾಸಿಕ ಸ್ಮಾರಕಗಳೇ ಅದನ್ನು ಪುಷ್ಟೀಕರಿಸುತ್ತಿವೆ. ವಿದೇಶಿ ಪ್ರವಾಸಿಗರಾದ ಅಬ್ದುಲ್ ರಜಾಕ್ ಹಾಗೂ ಡೊಮಿಂಗೊ ಪಯಾಸ್ ತಮ್ಮ ಪ್ರವಾಸ ಕಥನಗಳಲ್ಲಿ ದಸರಾ ಆಚರಣೆ ಕುರಿತು ವರ್ಣಿಸಿದ್ದಾರೆ. ಇದೆಲ್ಲದಕ್ಕೂ ನಿದರ್ಶನವಾಗಿ ಹಂಪಿಯಲ್ಲಿ ಮಹಾನವಮಿ ದಿಬ್ಬ ಕಂಗೊಳಿಸುತ್ತಿದೆ. ವಿಜಯ ನಗರ ಸಾಮ್ರಾಜ್ಯದ ಪತನದ ಬಳಿಕವಷ್ಟೇ ದಸರಾ ಆಚರಣೆ ಮರೆಯಾಯಿತು. ಇಲ್ಲಿ ಆಚರಣೆ ನಿಂತಿದ್ದರೂ ಹಂಪಿಯ ಪ್ರೇರಣೆಯಿಂದಾಗಿ ಮೈಸೂರಿನಲ್ಲಿ ದಸರಾ ವಿಜೃಂಭಿಸುತ್ತಿದೆ.

ಆಚರಣೆ ಹೀಗಿತ್ತು

ವಿಜಯನಗರ ಕಾಲದ ಅರಸರು ಆಚರಿಸುತ್ತಿದ್ದ ದಸರಾವೇ ವಿಭಿನ್ನ. 9 ದಿನ ನಡೆಯುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ದಂಡೋಪಾದಿಯಲ್ಲಿ ಜನ ವೀಕ್ಷಿಸುತ್ತಿದ್ದರು. ಆಗಿನ ರಾಜ, ಮಹಾರಾಜರು ಮಹಾನವಮಿ ದಿಬ್ಬದ ಮೇಲೆ ಆಸೀನರಾಗಿ ದಸರಾ ವೀಕ್ಷಣೆ ಮಾಡುತ್ತಿದ್ದರು. ಶ್ರೀ ವಿರೂಪಾಕ್ಷೇಶ್ವರ ದೇಗುಲದಿಂದ ಮಹಾನವಮಿ ದಿಬ್ಬದವರೆಗಿನ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು. ದಸರಾ ನಿಮಿತ್ತ ಸೈನಿಕರು ಹಾಗೂ ರಾಜರು ಬೇಟೆಗೆ ತೆರಳುತ್ತಿದ್ದರು. ಬೇಟೆಯ ಮೆರವಣಿಗೆ ಕೂಡ ನಡೆಯುತ್ತಿತ್ತು. ನಂತರ ಮಾಂಡಲೀಕ ಅರಸರು ರಾಜರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರು. ದಸರಾ ನಿಮಿತ್ತ ಕುಸ್ತಿ, ಮಲ್ಲಕಂಬ ನಾನಾ ಸ್ಪರ್ಧೆಗಳು ನಡೆಯುತ್ತಿದ್ದವು. ಮಾಂಡಲೀಕ ಅರಸರ ಸೆನಿಕರು ಸಮರ ಕಲೆ ಪ್ರದರ್ಶಿಸುತ್ತಿದ್ದರು. ಕೇಂದ್ರ ಸೆನಿಕರು ತಮ್ಮ ಶೌರ್ಯ ಪ್ರದರ್ಶಿಸುತ್ತಿದ್ದರು. ಹಂಪಿಯ ಸ್ಮಾರಕಗಳನ್ನು ಶಂಗರಿಸಲಾಗುತ್ತಿತ್ತು. ಕಲಾವಿದರು, ನತ್ಯಗಾರರು ತಮ್ಮ ಕೌಶಲ ಪ್ರದರ್ಶಿಸಿ ರಾಜರಿಂದ ಗೌರವ ಕಾಣಿಕೆಗಳನ್ನು ಪಡೆಯುತ್ತಿದ್ದರು. ಮೈಸೂರು ದಸರಾಕ್ಕೆ ವಿಶ್ವವಿಖ್ಯಾತ ಹಂಪಿ ಪ್ರೇರಣೆಯಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆಚರಣೆಯನ್ನು ಚಾಲ್ತಿಗೆ ತಂದ ಬೀಡು ಇಂದು ವೈಭವದ ಸನ್ನಿವೇಶಗಳಿಲ್ಲದೆ ಭಣಗುಡುತ್ತಿದೆ.