ಇದು ಸಹ ನಿರುದ್ಯೊಗ ಸಮಸ್ಯೆಯ ಕಾರಣ!!

ಬೆಳಿಗ್ಗೆಯಿಂದ ಏನು ಬರೆಯೋದು ಅಂತ ಯೋಚನೆ ಮಾಡ್ತಿರುವಾಗ Justice ಬ್ಲಾಗಿನ ಬಾಗಿಲಿಗೆ ಒಂದು ಮಿಂಚಂಚೆ ಬಂದಿತ್ತು ಕಳುಹಿಸಿದ್ದು ಮಂಜುನಾಥ ಅಂತ.
ಅವರು ಬರೆದ ಲೇಖನ ಈ ಬ್ಲಾಗಿನ ಮೂಲಕ ಹಂಚಿಕೊಳ್ಳುತ್ತಿದ್ದೆನೆ.
------------------------------------------------------------------

ನಿರೋದ್ಯೋಗ ಇದು ಸಧ್ಯದ ದಿನದಲ್ಲಿ ಕಾಡುತ್ತಿರುವ ಎರಡನೆ ದೊಡ್ಡ ಸಮಸ್ಯೆ.
ಹಾಗಿದ್ದಲ್ಲಿ ಭಾರತದಲ್ಲಿ ದಿನನದಕ್ಕೂ ಬೆಳೆಯುತ್ತಿರುವ ಉದ್ಯಮಗಳು ಇಲ್ಲಿನ ಯುವಕರಿಗೆ ಕೆಲಸವನ್ನು ನೀಡುತ್ತಿಲ್ಲವೆ ?  ನಮ್ಮ ಯುವಕರು ಕೆಲಸ ಕೇಳಿದರು ಅವರ ಅನುಭವ ಮತ್ತು ವಿದ್ಯೆಗೆ ಕೆಲಸ ನೀಡುತ್ತಿಲ್ಲವೆ.?
ಈ ಬಗ್ಗೆ ಇವತ್ತು ಬರೆಯುತ್ತಿದ್ದೆನೆ.

ನಮಸ್ಕಾರ ನಾನು ನಿಮ್ಮಂತೆಯೆ ಕಾರ್ಮಿಕ ವರ್ಗದಲ್ಲಿ ದುಡಿಯುತ್ತಿರುವ ಕಾರ್ಮಿಕ ಮಿತ್ರ.
ಇಷ್ಟು ದಿನಗಳಲ್ಲಿ ನನ್ನ ಸುತ್ತಲಿನ ಕೈಗಾರಿಕಾ ಬೆಳವಣಿಗೆಗಳು ಮತ್ತು ಕೆಲುವೊಂದು ಮೇಲಧಿಕಾರಿಗಳ ದೌರ್ಜನ್ಯ ಕಾರ್ಮಿಕರ ಮೇಲಿನ ಹಕ್ಕು ಚಲಾವಣೆಗಳನ್ನು ತುಂಬ ಹತ್ತಿರದಿಂದ ಗಮನಿಸಿದ ಕಾರಣ ಈ ಲೇಖನ ಬರೆಯಲು ಪ್ರೇರೆಪಿಸಿತು.

ದೇಶದಲ್ಲಿ ಕಾರ್ಮಿಕ ಎನ್ನುವ ಕಿಡಿಯನ್ನು ಸೃಷ್ಟಿಸುವ ಐ.ಟಿ.ಐ ಡಿಪ್ಲೋಮಾದಂತ ಕಾಲೇಜುಗಳು ಬಹಳಷ್ಟಿವೆ.
ಆದರೆ ಆ ಕಿಡಿಗಳು ಮೊದಲ ಕೈಗಾರಿಕಾವಲಯದ ಹಂತದಲ್ಲಿ ಪ್ರಜ್ವಲಿಸದೆ ಆರಿಹೋಗುವ ಉದಾಹರಣೆ ಪ್ರತಿದಿನ ಸಿಗುತ್ತವೆ.

ಮುಂದೆ ಬದುಕು ಕಟ್ಟಿಕೊಳ್ಳಬೇಕಾದ ಈ ವಿಧ್ಯಾರ್ಥಿಗಳಲ್ಲಿ ಐವತ್ತರಷ್ಟು ಜನ ವರ್ಷದಲ್ಲೆ ಊರಿನತ್ತ ಮುಖಮಾಡಿ ಅವರ ಮೂಲ ಕಸುಬುಗಳಾದಂತಹ  ವ್ಯವಸಾಯ,ವ್ಯಾಪಾರ ಹೈನುಗಾರಿಕೆಗೆ ಮರಳುತ್ತಾರೆ.
ಆದರೆ ಉಳಿದ ಐವತ್ತರಲ್ಲಿ ಕಂಪನಿಯಲ್ಲಿ ಮನುಷ್ಯನನ್ನು ಮೀರಿಸುವ ಹಾಗೆ ಗಾಣದ ಎತ್ತಿನಂತೆ ದುಡಿದು ಖಾಯಂ ಕೆಲಸಗಿಟ್ಟಿಸಿಕೊಳ್ಳುವವರು ಹತ್ತು% ಅಷ್ಟೆ!!
ಉಳಿದವರು ಕಂಪನಿಯಿಂದ ಕಂಪನಿಗೆ ಅಲೆಯುತ್ತ ಅಥವ ಕಲೆತಿರುವ ವಿದ್ಯೆಗೆ ತದ್ವಿರುದ್ಧವಾಗಿರುವ ಕೆಲಸ ಮಾಡುತ್ತ ಬೆಂಗಳೂರಿನಂತ ಬೃಹತ್ ಕೈಗಾರಿಕಾವಲಯದಲ್ಲಿ ಒಂದೆ ರೀತಿಯ ಸಂಬಳದಲ್ಲಿ ಬದುಕುತ್ತಿದ್ದಾರೆ.
ಹಾಗಿದ್ದಲ್ಲಿ ಇವರ ಈ ಸ್ಥಿತಿಗೆ ಕಾರಣ ಯಾರು?
ಇದೆ ಕಾರಣದ ಜಾಡು ಹಿಡಿಯುತ್ತ ಹೋದರೆ ಒಂದು ವ್ಯವಸ್ಥಿತ ಪಿತೂರಿಯ ಕಾರ್ಮಿಕರ ಧ್ವನಿ ಅಡಗಿಸಲೆಂದು ತರಬೇತಿ ಪಡೆದಂತಹ ಮೇಲ್ವರ್ಗದ  ಅಧಿಕಾರಿಗಳ ಜಾಲವೆ ಕಂಡುಬರುತ್ತದೆ.
ಉದ್ಯೋಗದಾತರನ್ನು ಮೆಚ್ಚಿಸಲು ತಮ್ಮ ಪ್ರಮೋಷನ್ ಸಂಬಳ  ಬಡ್ತಿಗಳಿಗಾಗಿ ಅವರು ನಿರಿಕ್ಷಿಸಿದ್ದಕ್ಕಿಂತ ಹೆಚ್ಚಿಗೆ ಉತ್ಪನ್ನಗಳನ್ನು(any product in Production Department ನೀಡುತ್ತ ಅವರಿಗಾಗಿಯೆ ಬದುಕುವಂತ ವಿಕೃತರಿದ್ದಾರೆ..
ಆದರೆ ಆ ಉತ್ಪನ್ನ ತಯಾರಿಸುತ್ತ ಒಂದು ಚೌಕಟ್ಟಿನ ಜಾಗದಲ್ಲಿ ಎಂಟು ಒಂಬತ್ತು ಗಂಟೆ ಯಂತ್ರಗಳೊಂದಿಗೆ ಯಾಂತ್ರಿಕತೆಯ ವೇಗದಲ್ಲಿ ದುಡಿಯುವ,ದಣಿಯುವ, ಬೆಂದುಹೋದ ಕಾರ್ಮಿಕ ಜೀವಗಳು ಉದ್ಯೋಗದಾತರಿಗೆ ಕಾಣುವುದೆ ಇಲ್ಲ!! ಕಾಣದ ರೀತಿಯಲ್ಲಿಯೆ ದುಡಿಸಲಾಗುತ್ತದೆ.

ಏಕೆ ಈ ಧೋರಣೆ ?

ಇದನ್ನು ಪ್ರಶ್ನಿಸಿದ ಕಾರ್ಮಿಕ ಸಂಘಟನೆಯನ್ನು ತಮ್ಮ ಅಧಿಕಾರದ ಬಲದಿಂದಲೆ ಹತ್ತಿಕ್ಕುತ್ತಾರೆ.
ಅವರ ಉದ್ಯೋಗ ಕಸೆದುಕೊಳ್ಳುವಂತ ಬೆದರಿಕೆಯೊಡ್ಡಿ ಒಬ್ಬ ಕಾರ್ಮಿಕನ ಬಾಯಿಯನ್ನು ಕಟ್ಟಿಹಾಕಲಾಗುತ್ತದೆ.
ಇದರ ನಡುವೆ ಈ ಗುತ್ತಿಗೆ ಕಾರ್ಮಿಕ ಪದ್ಧತಿಯಡಿಯಲ್ಲಿ ದುಡಿಯುವ ವ್ಯಕ್ತಿಯನ್ನು ಜೀತದಾಳಿನಂತೆ ಕಂಪನಿಗಳು ದುಡಿಸುತ್ತವೆ.
ಈ ಗುತ್ತಿಗೆ ಪದ್ಧತಿ ಕೊನೆಯಾಗುವವರೆಗೂ ಈ ಸಮಸ್ಯೆಗೆ ಮುಕ್ತಿಯಿಲ್ಲ.

ಇದಕ್ಕೂ ನಿರುದ್ಯೋಗಕ್ಕು ಎಲ್ಲಿಯ ಸಂಬಂಧ ಅಂತ  ಯೋಚಿಸುತ್ತಿದ್ದಿರಾ ?
 ಖಂಡಿತವಾಗಿಯು ಇದೆ!!

ದಿನದ ಎಂಟುಗಂಟೆಯ ಅವಧಿಯಂತೆ ಮೂರು ಶಿಫ್ಟ್'ಗಳಲ್ಲಿ ನೆಡೆಯುತ್ತಿದ್ದ ಕೆಲಸ ಈಗ ಒಂಬತ್ತು ಗಂಟೆಯ ಅವಧಿಯಂತೆ ಎರಡು ಶಿಫ್ಟ್ ಮಾತ್ರ ನೆಡೆಯುತ್ತಿವೆ.( ಇದರಿಂದ ಒಂದು ಅಂತರಾಷ್ಟ್ರೀಯ ಕಾರ್ಖಾನೆಯಲ್ಲಿ 500ರಕ್ಕಿಂತಲು ಜನ ಉದ್ಯೋಗವಂಚಿತರಾಗುತ್ತಾರೆ )
ಹಾಗಿದ್ದಲ್ಲಿ ಉಳಿದ ಒಂದು ಶಿಫ್ಟ್'ನಲ್ಲಿ ತಯಾರಿಸುವ ಉತ್ಪನ್ನ ಎಲ್ಲಿ ಹೋಯಿತು???!
ಆ ಉತ್ಪಾದನೆ ಪ್ರತಿನಿತ್ಯ  ಎರಡು ಶಿಫ್ಟ್'ನಲ್ಲಿ ದುಡಿಸಲಾಗುತ್ತದೆ ಅದಕ್ಕೆ Full Production ಮತ್ತು over Quantity Parts Producing   ಅಂತಾರೆ.
ಇವುಗಳನ್ನು ಮನುಷ್ಯನ ಶಕ್ತಿ ಸಾಮರ್ಥ್ಯ ಆರೋಗ್ಯ  ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದುಡಿಸಲಾಗುತ್ತಿತ್ತು ಆದರೆ ಈಗ ಆ ನಿಯಮ ಗಾಳಿಗೆ ತೂರಿ ಮನುಷ್ಯನ ಕಾಲುಗಳ ನರಗಳೆಲ್ಲವು ಹೆಪ್ಪುಗಟ್ಟುವ ಹಾಗೆ ದುಡಿಸಲಾಗುತ್ತಿದೆ..
ಅದು ಆರೇಳು ಯಂತ್ರಗಳಿಗೆ ಇಬ್ಬರೆ ಕಾರ್ಮಿಕರು!!
ಉಳಿದ ಕಾರ್ಮಿಕರು ಎಲ್ಲಿ?!!
ಅವರನ್ನು Manpower Reduction(ನನ್ನ  ಸಹೋದ್ಯೊಗಿ  ಸ್ನೇಹಿತರಿಗೆ ಅರ್ಥವಾಗಿರುತ್ತೆ) ಎನ್ನುವ ಒಂದು ತಂತ್ರದಿಂದ. ಈ ತಂತ್ರವನ್ನು ಹೆಣೆದು ಕೊಟ್ಟವರು ನಮ್ಮ ಮಧ್ಯೆ ಪ್ರತಿನಿತ್ಯ ದುಡಿಯುವ ಉಸ್ತುವಾರಿ ಅಭಿಯಂತ್ರರೆ ಎನ್ನುವುದು ದುಃಖದ ಸಂಗತಿ.
ಈ ತಂತ್ರದಿಂದ ಲಾಭ ಉದ್ಯೋಗದಾತರಿಗೆ ಹೊರತು ಉದ್ಯೋಗಿಗಳಿಗಲ್ಲ.
ಆದರೆ ಇದನ್ನು ಸಹ ಅಭಿಯಂತ್ರರರ ಮೇಲೆ ಒತ್ತಡ ಹೇರುತ್ತಾರೆ ಈ ಮ್ಯಾನೆಜ್ಮೆಂಟ್ ಡಿಪಾರ್ಟಮೆಂಟ್'ನ ಅನುಭವಸ್ತ ಕುಳಗಳು.

ಒಂದು ಶಿಫ್ಟ್'ನ ಕೆಲಸವನ್ನು ಕಿತ್ತುಕೊಂಡು ಸಾಲದೆ ಈ Manpower Reduction ಮೂಲಕ ಕೆಲಸಗಾರರ ಸಂಖ್ಯೆ ಕಡಿತಗೊಳಿಸುತ್ತ ಕಾರ್ಖಾನೆಗಳು ಅಧಿಕ ಲಾಭಗಳತ್ತ ಮುಖಮಾಡುತ್ತಿವೆ .
ಅವರ ಲಾಭಗಳು ಏನಿದ್ದರು ಉತ್ಪಾದನೆಯ ಮಾರಾಟವನ್ನು ಅವಲಂಬಿಸಿರಬೇಕೆ ಹೊರತು ಕಾರ್ಮಿಕರ ಕೆಲಸ ಕಡಿತಗೊಳಿಸಿ ಅವರ ಸಂಬಳ ಉಳಿಸಿಕೊಳ್ಳುವುದಲ್ಲ.

ಹೇಳುತ್ತ ಹೋದರೆ ಕಾರ್ಖಾನೆಯ ಮಲೀನ ತಾಜ್ಯಕ್ಕಿಂತಲು ವಿಷಕಾರಿ ವಿವರಣೆಗಳಿವೆ.

ಇದನ್ನು ಕೇಳುವ ಹಕ್ಕಿರುವ ರಾಜ್ಯದ ಕೈಗಾರಿಕಾ ಸಚೀವರು ತೆಪ್ಪಗಿದ್ದಾರೆ.
ಕೇಂದ್ರದಲ್ಲಂತು ವಿದೇಶಿ ಕಂಪನಿಗಳಿಗೆ ಮಣೆಹಾಕಲಾಗುತ್ತಿದೆ.
ಇದರ ನಡುವೆ ಬದುಕುವ ಆ ಕಾರ್ಮಿಕ ಕಿಡಿ ಇದನ್ನು ಮೆಟ್ಟಿನಿಂತು ಪ್ರಖರಜ್ವಾಲೆಯಾಗಿ ಮತ್ತೊಮ್ಮೆ ಕೈಗಾರಿಕಾ ಕ್ರಾಂತಿಯ ಸಂದೇಶ ನೀಡಬೇಕಿದೆ.

ಇದನ್ನು ಅಲ್ಲಗೆಳೆಯುವ ಬುದ್ಧಿಜೀವಿ ಎಡಪರಚಿಂತಕರೊಮ್ಮೆ (ಬಕೀಟು ಅಂತ ಹೇಸರಿದೆ) ನನ್ನನ್ನು ಭೇಟಿಯಾಗಿ ಮಾತನಾಡೋಣ.


-MP.B