ನಾಗರಕಟ್ಟೆ ಶಂಕರ್ ಅನ್ನೋ ಹೆಸರಿನಿಂದ ಬದುಕಿನ ಪಯಣಆರಂಭಿಸಿದ ಶಂಕರ್ ನಾಗ್ ಕನ್ನಡ ಚಿತ್ರರಂಗ ಮತ್ತುರಂಗಭೂಮಿಗೆ ಮಹತ್ತರವಾದ ಕೊಡುಗೆ ನೀಡಿದ ಸೃಜನಶೀಲವ್ಯಕ್ತಿ. ನಟ, ನಿರ್ಮಾಪಕ, ನಿದೇರ್ಶಕ, ಬರಹಗಾರ ಹೀಗೆ ಎಲ್ಲಾಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ ಶಂಕರ್ ನಾಗ್ ಅಭಿಮಾನಿಗಳಿಗೆ ಮಾತ್ರ ಎಂದಿಗೂ ಆಟೋ ರಾಜನಾಗಿಯೇಉಳಿದಿದ್ದಾರೆ.
ಶಂಕರ್‌ನಾಗ್ ಅವರನ್ನು ಬಾಲ್ಯದಲ್ಲಿ ಭವಾನಿ ಶಂಕರ್ ಎಂದು ಕರೆಯುತ್ತಿದ್ದರಂತೆ.
ನವೆಂಬರ್ 9,1954 ರಂದು ಕರ್ನಾಟಕದ ಹೊನ್ನಾವರತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ನಾಗ್ ಅವರು ಜನಿಸಿದರು. ತಂದೆ ಹೊನ್ನಾವರದ ನಾಗರಕಟ್ಟೆಯ ಸದಾನಂದ. ಬಾಲ್ಯದಲ್ಲಿ ಪ್ರೀತಿಯಿಂದ ಭವಾನಿಶಂಕರ್ ಎಂದು ಇವರ ತಂದೆ ಕರೆಯುತ್ತಿದ್ದರು.
ಶಂಕರ್‌ನಾಗ್ ಮೊಟ್ಟ ಮೊದಲು ಕಾಲಿಟ್ಟಿದ್ದು ಮರಾಠಿರಂಗಭೂಮಿಗೆ.
ಶಂಕರ್ ನಾಗ್ ತಮ್ಮ ವಿದ್ಯಾಭ್ಯಾಸದ ನಂತರ ಮುಂಬೈಗೆತೆರಳಿದರು. ಅಲ್ಲಿ ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆಆಕರ್ಶಿತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಕೊಂಡರು.ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮೊಟ್ಟಮೊದಲ ಮರಾಠಿ ಚಿತ್ರದ ಹೆಸರು ’22 ಜೂನ್ 1897’. ಈಚಿತ್ರ ಎಷ್ಟು ಪ್ರಖ್ಯಾತಿಗೊಂಡಿತ್ತು ಎಂದರೆ, ಇದು ರಾಷ್ಟ್ರೀಯಚಲನಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು. ಆರಂಭದಲ್ಲೇರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಕನ್ನಡಿಗ ಶಂಕರ್‌ನಾಗ್.. ಅದೂ ಅನ್ಯ ಭಾಷೆಯಲ್ಲಿ ಸಾಧಿಸಿ ತೋರಿಸಿದ ಸಾಧಕ.
ಶಂಕರ್‌ನಾಗ್ ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ಅಣ್ಣಅನಂತ್ ನಾಗ್ ಬ್ಯಾಂಕ್ ನೌಕರಿಗೇರಿದರು. ಅಣ್ಣನಂತೆತಮ್ಮನೂ ಕೂಡ ಬ್ಯಾಂಕ್ ನೌಕರಾನಾದರೂ ನಂತರದಲ್ಲಿಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನುಪ್ರಾರಂಭ ಮಾಡಿದರು.
ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶಂಕರ್‌ನಾಗ್
ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವಚಿತ್ರದ ಮೂಲಕ ಶಂಕರ್‌ನಾಗ್ ಕನ್ನಡ ಚಿತ್ರರಂಗಕ್ಕೆಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನುಗಳಿಸಿದರು ಶಂಕರ್ ನಾಗ್. ನಂತರ ಅವರು ಹಿಂದೆ ತಿರುಗಿನೋಡಿದ್ದೇ ಇಲ್ಲ. ಸತತ 12 ವರ್ಷಗಳ ಕಾಲ ಕನ್ನಡದಲ್ಲಿಸುಮಾರು 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದಚಿತ್ರ "ಗೆದ್ದ ಮಗ". ಅನಂತ ನಾಗ್ ಅವರೊಡನೆ "ಮಿಂಚಿನಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು.
ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿನಾವಿರೋದು ಹೀಗೆ" ಸೇರಿದಂತೆ ಕೆಆರ್ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಗಳನ್ನು ನಾಟಕಗಳನ್ನಾಗಿರೂಪಿಸಿ ಜನರ ಮನದಲ್ಲಿ ಉಳಿಯುವಂತೆ ಮಾಡಿದಕ್ರಿಯೇಟಿವಿಟಿಯ ಹರಿಕಾರ ಶಂಕರ್ ನಾಗ್.
ದೇಶದಲ್ಲೇ ದಾಖಲೆ ಮಾಡಿದ "ಮಾಲ್ಗುಡಿ ಡೇಸ್" ಗೆಶಂಕರ್‌ನಾಗ್ ನಿರ್ದೇಶನ.
ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ"ಮಾಲ್ಗುಡಿ ಡೇಸ್ ಧಾರಾವಾಹಿ ಶಂಕರ್‌ನಾಗ್ ಕ್ರಿಯೇಟಿವಿಟಿಯಿಂದ ಮೂಡಿ ಬಂದಿದ್ದು ,ಇಂದೂ ಸಹ ಹೆಚ್ಚುಜನ ಪ್ರಿಯತೆಯನ್ನು ಗಳಿಸಿದೆ. ಮರು ಪ್ರಸಾರಗೊಳ್ಳುತ್ತಿದೆ. ಪಂಡಿತರು, ಬುದ್ಧಿ ಜನಾಂಗದಿಂದಲೂ ಮೆಚ್ಚುಗೆ ಗಳಿಸಿದಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್
ಶಂಕರ್‌ನಾಗ್ ಬದುಕು ಮತ್ತು ಕನಸುಗಳು
ಶಂಕರ್ ನಾಗ್ ಅವರು ಕಲಾವಿದೆಯಾಗಿದ್ದ ಅರುಂಧತಿಅವರನ್ನು ಇಷ್ಟ ಪಟ್ಟು ಪ್ರೀತಿಸಿ ನಂತರ ಮದುವೆಯಾದರು. ಇವರ ಪ್ರೀತಿಗೆ ಸಾಕ್ಷಿಯಾಗಿ ಕಾವ್ಯ ಎಂಬ ಮಗಳು ಕೂಡಇದ್ದಾಳೆ.
ಶಂಕರನಾಗ್ ಅವರಿಗೆ ರಂಗಭೂಮಿಯ ಕಲಾವಿದರಿಗೆನೆರವಾಗುವಂತೆ ನಾಟಕಮಂದಿರವೊಂದನ್ನುನಿರ್ಮಿಸಬೇಕೆಂಬ ಆಸೆ ಇತ್ತು. ಆದ್ರೆ ವಿಧಿವಿಪರ್ಯಾಸವೆಂದರೆ, ಆ ಯೋಜನೆಯು ಕಾರ್ಯರೂಪಕ್ಕೆಬರುವ ಮುಂಚೆಯೇ ಶಂಕರನಾಗ್ ಅವರು ಅಪಘಾತದಲ್ಲಿದುರ್ಮರಣಕ್ಕೀಡಾದರು. ಆದ್ರೆ ಅವರ ಪತ್ನಿ ಅರುಂಧತಿನಾಗ್ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆತಂದಿದ್ದಾರೆ. ಆ ರಂಗಮಂದಿರಕ್ಕೆ"ರಂಗಶಂಕರ" ಎಂದುಹೆಸರಿಟ್ಟಿದ್ದಾರೆ.
ಅಣ್ಣಾವ್ರ ಸಿನೆಮಾ ನಿರ್ದೇಶನ ಮಾಡಿದ ಶಂಕರ್‌ನಾಗ್.
ಡಾ.ರಾಜ್ ಕುಮಾರ್ ಅಭಿನಯಿಸಿರುವ "ಒಂದು ಮುತ್ತಿನಕಥೆ" ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು. ಈ ಮೂಲಕಅಣ್ಣಾವ್ರ ಜೊತೆಗೂ ಉತ್ತಮ ಒಡನಾಟವನ್ನು ಹೊಂದಿದ್ದರು.ಶಂಕರ್ ಅತ್ಯಂತ ಕಿತಿಯ ವಯಸ್ಸಿನಲ್ಲೇ ಉನ್ನತಮಟ್ಟಕ್ಕೇರಿದ ಅಭೂತಪೂರ್ವ ಪ್ರತಿಭೆ ಎಂದರೆಅತಿಶಯೋಕ್ತಿಯಲ್ಲ.
ಇಂಜಿನಿಯರ್ ಆಗಿ ಶಂಕರ್ ಕಂಡಿದ್ದ ಕನಸು..
ಬೆಂಗಳೂರು ಮೆಟ್ರೋ ಕನಸನ್ನು ಶಂಕರ್‌ನಾಗ್ ಅಂದಿನಕಾಲದಲ್ಲಿಯೇ ಕಂಡಿದ್ದರು. ಅಷ್ಟೇ ಅಲ್ಲ, ಬೆಟ್ಟಕ್ಕೆ ರೋಪ್ ವೇಹಾಕುವುದು, ರಂಗಮಂದಿರಗಳ ಅಭಿವೃದ್ಧಿ, ಸೇರಿದಂತೆಕರ್ನಾಟಕದ ಅಭಿವೃದ್ದಿಯ ಕನಸನ್ನು ಕಂಡಿದ್ದರು ಶಂಕರ್‌ನಾಗ್. ಸಂಕೇತ್ ಸ್ಟುಡಿಯೋ ಶಂಕರ್ ನಾಗ್ ಅವರಮತ್ತೊಂದು ಕಲಾ ಕೊಡುಗೆಯಾಗಿದೆ.
ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ಆಸೆಶಂಕರ್ ನಾಗ್ ಅವರಿಗೆ ಇತ್ತು.
ಬಡವರಿಗೆ ಕಡಿಮೆ ದರದಲ್ಲಿ, ಅತ್ಯಂತ ಕಡಿಮೆ ದಿನಗಳಲ್ಲಿಮನೆಗಳನ್ನು ನಿರ್ಮಿಸಿ ಕೊಡಬೇಕೆಂಬ ಅಭಿಲಾಷೆಶಂಕರ್‌ನಾಗ್ ಅವರಿಗೆ ಇತ್ತು. ಈ ಸಂಬಂಧ ನಕ್ಷೆ ತಯಾರಿಸಿಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣಹೆಗ್ಗಡೆಯಚವರ ಸರ್ಕಾರದ ಮುಂದೆ ತಮ್ಮ ಎಲ್ಲಾಧ್ಯೇಯೋದ್ದೇಶಗಳು ಮತ್ತು ಕಾರ್ಯಯೋಜನೆಗಳನ್ನುಇಟ್ಟಿದ್ದರು. ದುರಾದೃಷ್ಟ ಎಂದರೆ, ಶಂಕರ್‌ನಾಗ್ ಅವರಕನಸಿನ ಕಾರ್ಯಯೋಜನೆಗಳಿಗೆ ಸರ್ಕಾರ ಸಕಾರಾತ್ಮಕವಾಗಿಸ್ಪಂದಿಸಲಿಲ್ಲ. ಹಾಗೇನಾದರೂ ಸರ್ಕಾರ ಸ್ಪಂದಿಸಿದಿದ್ರೆ, ಇಷ್ಟೋತ್ತಿಗಾಗಲೇ ಬೆಂಗಳೂರು ತುಂಬಾ ಮೆಟ್ರೋ ರೈಲುಗಳಅಬ್ಬರ ಜೋರಾಗಿರುತ್ತಿತ್ತು.
ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಅಪಘಾತ.
ಸೆಪ್ಟೆಂಬರ್ 30, 1990 ರಲ್ಲಿ ’ಜೋಕುರಸ್ವಾಮಿ’ ಎಂಬ ಚಿತ್ರದಚಿತ್ರೀಕರಣಕ್ಕಾಗಿ ಕಾರಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು. ದಾವಣಗೆರೆ ಬಳಿಯ ಅನಗೋಡು ಎಂಬ ಹಳ್ಳಿಯಸಮೀಪಕ್ಕೆ ಬರುತ್ತಿರುವಂತೆ ಶಂಕರ್ ನಾಗ್ ಅವರ ಕಾರುಅಪಘಾತಕ್ಕೀಡಾಯಿತು. ಇದರಿಂದ ತೀವ್ರ ಗಾಯಗೊಂಡಿದ್ದಅದಮ್ಯ ಚೇತನ ಶಂಕರ್ ನಾಗ್ ಕೊನೆಯುಸಿರೆಳೆದರು.
ಶಂಕರ್ ನಾಗ್ ವರ ಕೊನೆಯ ಸಿನೆಮಾ "ನಿಗೂಢರಹಸ್ಯ"
ಕನ್ನಡ ಜನತೆಗೆ ಶಂಕರ್‌ನಾಗ್ ಕೊನೆಯದಾಗಿ ಬಿಟ್ಟು ಹೋದಚಿತ್ರವೆಂದರೆ, ನಿಗೂಢ ರಹಸ್ಯ. ಇದು ಶಂಕರ್ ನಾಗ್ಅಭಿನಯದ ಕೊನೆಯ ಚಿತ್ರ. ಈ ಸಿನೆಮಾದಲ್ಲಿ ನಿಗೂಢರಹಸ್ಯವನ್ನು ಭೇದಿಸುವ ಸಾಹಸಿಗನಾಗಿ ಕಾಣಿಸಿಕೊಂಡಿರುವಶಂಕರ್‌ನಾಗ್ ಸಾವು ಕನ್ನಡಿಗರಿಗೆ ಅರಗಿಸಿಕೊಳ್ಳಲಾದೇನಿಗೂಢ ರಹಸ್ಯವಾಗಿ ಉಳಿದುಬಿಟ್ಟಿತು.



