ಹ್ಯಾಕಿಂಗ್/Hacking ಬಗ್ಗೆ ಒಂದು ಮಾಹಿತಿ



ಹ್ಯಾಕಿಂಗ್ ಜಗತ್ತು
ಹ್ಯಾಕಿಂಗ್ ಅನ್ನುವುದು ವಿಚಿತ್ರ ಲೋಕ. ಇಲ್ಲಿ, ಒಳ್ಳೆಯವರು ಕೆಟ್ಟವರು ಇಬ್ಬರೂ ಇದ್ದಾರೆ. ಈ ಇಂಟರ್ನೆಟ್ ಜಗತ್ತಿನ ನೆರಳಲ್ಲಿ ಬೆಳೆದ ಲೋಕದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

100
2012ರಲ್ಲಿ ಹ್ಯಾಕಿಂಗ್ ತುತ್ತಾಗಿರುವ ವಿವಿಗಳು
6 ಪ್ರತಿ ದಿನ ಹ್ಯಾಕ್ ಆಗುವ ಫೇಸ್‌ಬುಕ್ ಖಾತೆ
7 2011ರಲ್ಲಿ ಹ್ಯಾಕ್ ಆದ ಸೋನಿ ಪ್ಲೇಸ್ಟೇಷನ್ ಖಾತೆ

ಹ್ಯಾಕರ್‌ಗಳಲ್ಲಿ 3 ವಿಧ

-ವೈಟ್ ಹ್ಯಾಟ್
ಈ ಗುಂಪಿಗೆ ಸೇರಿದವರು ನೈತಿಕ ಮಾರ್ಗದ ಮೂಲಕ ಹ್ಯಾಕಿಂಕ್ ನಡೆಸುತ್ತಾರೆ.
ಇವರನ್ನು ಸಭ್ಯ ಹ್ಯಾಕರ್‌ಗಳೆನ್ನಬಹುದು. ಹ್ಯಾಕಿಂಗ್ ತಂತ್ರವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ಯಾವುದೇ ಕಂಪನಿಯ ನೆಟ್‌ವರ್ಕ್ ಹ್ಯಾಕ್ ಮಾಡಬೇಕಾದರೆ ಇವರು ಅನುಮತಿ ಕೇಳುತ್ತಾರೆ. ಬಳಿಕ ಆ ನೆಟ್‌ವರ್ಕ್‌ನಲ್ಲಿರುವ ದೌರ್ಬಲ್ಯಗಳನ್ನು ಎತ್ತಿತೋರಿಸುತ್ತಾರೆ.

-ಗ್ರೇಹ್ಯಾಟ್
ಈ ಗುಂಪಿಗೆ ಸೇರಿದ ಹ್ಯಾಕರ್‌ಗಳಿಗೆ ಯಾವುದೇ ದುರದ್ದೇಶ ಇರುವುದಿಲ್ಲ. ಇವರು ಕಂಪನಿಯ ನೆಟ್‌ವರ್ಕ್‌ವೊಂದನ್ನು ಅಕ್ರಮವಾಗಿ ಭೇದಿಸಿ ಸಾರ್ವಜನಿಕರಿಗೆ ಅದರ ಲೋಪದೋಷಗಳ ಕುರಿತು ಮಾಹಿತಿ ನೀಡುತ್ತಾರೆ. ಇವರು ಕಾನೂನು ರೀತಿಯಲ್ಲಿ ಅಥವಾ ಅಕ್ರಮವಾಗಿ ಹ್ಯಾಕಿಂಕ್ ಕಾರ್ಯ ನಡೆಸಬಹುದು. ಆದರೆ, ಇವರು ವೈಯಕ್ತಿಕ ಲಾಭದ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ಕೆ ಕೈ ಹಾಕುವುದಿಲ್ಲ.

-ಬ್ಲ್ಯಾಕ್ ಹ್ಯಾಟ್
ಈ ಗುಂಪಿಗೆ ಸೇರಿದ ಹ್ಯಾಕರ್‌ಗಳನ್ನು ಸೈಬರ್ ಕ್ರಿಮಿನಲ್‌ಗಳೆಂದು ಕರೆಯಲಾಗುತ್ತದೆ. ಇವರು ಕಂಪ್ಯೂಟರ್ ನೆಟ್‌ವರ್ಕ್‌ಗಳನ್ನು ಅಕ್ರಮವಾಗಿ ಭೇದಿಸಿ ಹೊರತೆಗೆಯುವ ಮಾಹಿತಿಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ.

ಪ್ರಮುಖ ಹ್ಯಾಕರ್‌ಗಳು
-ಆಲ್ಬರ್ಟ್ ಗೋಂಝಲೆಜ್

ಕ್ರೆಡಿಟ್‌ಕಾರ್ಡ್ ಅಕ್ರಮಕ್ಕೆ ಸಂಬಂಧಿಸಿ 2009ರಲ್ಲಿ ಈತನನ್ನು ದೋಷಿ ಎಂದು ಘೋಷಿಸಲಾಗಿತ್ತು.
ಈತನಿದ್ದ ಹ್ಯಾಕರ್‌ಗಳ ಗುಂಪು ಟಿಜೆಎಕ್ಸ್ ಕಂಪನಿಗೆ ಸೇರಿದ 3.6 ಕೋಟಿ ಕ್ರೆಡಿಟ್ ಕಾರ್ಡ್ ನಂಬರ್‌ಗಳನ್ನು ಕಳವು ಮಾಡಿತ್ತು. ಅಚ್ಚರಿಯ ವಿಚಾರವೆಂದರೆ ಶೇ.70ರಷ್ಟು ಕಾರ್ಡ್‌ಗಳ ಅವಧಿ ಮುಗಿತ್ತು.

-ಜೊನಾಥನ್ ಜೇಮ್ಸ್
16ನೇ ವಯಸ್ಸಿನಲ್ಲೇ ಹ್ಯಾಕಿಂಕ್ ಕ್ಷೇತ್ರಕ್ಕಿಳಿದ ಜೊನಾಥನ್ ಹ್ಯಾಕಿಂಗ್ ಜಗತ್ತಿನ ಮೊದಲ ಬಾಲಪರಾಧಿ. ಈತ 2006ರಲ್ಲಿ ಆರು ತಿಂಗಳ ಶಿಕ್ಷೆಗೆ ಗುರಿಯಾಗಿದ್ದ. ಈತ ನಾಸಾ ಮತ್ತು ರಕ್ಷಣಾ ಇಲಾಖೆಯ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿದ್ದ. ಈತನಿಗೆ ಯಾವುದೇ ದುರದ್ದೇಶ ಇಲ್ಲದಿದ್ದರೂ ಅದರಿಂದಾಗಿ ಸಂಸ್ಥೆಯ ಭದ್ರತಾ ವ್ಯವಸ್ಥೆ ಬಲಪಡಿಸಲು ಲಕ್ಷಾಂತರ ರುಪಾಯಿ ವೆಚ್ಚ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

-ಜೂಲಿಯನ್ ಅಸಾಂಜೆ

ವಿಕಿಲೀಕ್ಸ್‌ನ ಸಂಸ್ಥಾಪಕ ಜೂಲಿಯನ್ ಅಸಾಂಜೆಯನ್ನು ಹ್ಯಾಕರ್‌ಗಳ ಲೋಕದ ರಾಬಿನ್ ಹುಡ್ ಎಂದು ಕರೆಯಲಾಗುತ್ತದೆ. ಸ್ವತಃ ಹ್ಯಾಕರ್ ಆಗಿರುವ ಜೂಲಿಯನ್ ಅಸಾಂಜೆ ಸಮಾನಮನಸ್ಕರೊಂದಿಗೆ ಸೇರಿ ಕೆಲವು ಮಾಹಿತಿಗಳನ್ನು ಜನರ ಮುಂದೆ ಮುಕ್ತವಾಗಿ ಹಂಚಲು ಆರಂಭಿಸಿದ. ಇದರಿಂದ ಸರ್ಕಾರದ ಅನೇಕ ಅಕ್ರಮಗಳು ಬಯಲಿಗೆ ಬಂದವು. ಈತ ಸರ್ಕಾರಗಳ ಪಾಲಿಗೆ ಅಪರಾಧಿಯಾದರೆ ಜನರ ಕಣ್ಣಿಗೆ ಹೀರೋ.

-ಎಡ್ವರ್ಡ್ ಸ್ನೋಡೆನ್
ಅಸಾಂಜೆಯ ಬೆನ್ನಲ್ಲೇ ಹೆಚ್ಚು ಚರ್ಚೆಗೆ ಗ್ರಾಸವಾದ ಹ್ಯಾಕರ್ ಸ್ನೋಡೆನ್. ಇತರೆ ದೇಶಗಳ ಕಂಪ್ಯೂಟರ್‌ಗಳ ವ್ಯವಸ್ಥೆ ಮೇಲೆ ಅಮೆರಿಕ ಹಾಗೂ ಬ್ರಿಟನ್ ಸರ್ಕಾರ ಇಟ್ಟಿದ್ದ ಕಣ್ಗಾವಲು ವ್ಯವಸ್ಥೆಯನ್ನು ಈತ ಬಹಿರಂಗಪಡಿಸಿದ್ದ. ಇದರಿಂದ ಈತ ಅಮೆರಿಕ ಸರ್ಕಾರದ ಪಾಲಿಗೆ ವಿಲನ್ ಆಗಿ ಪರಿಣಮಿಸಿದ್ದ. ಆದರೆ, ಸಾರ್ವಜನಿಕರು ಈತನನ್ನು ಅಸಾಂಜೆಯಂತೆ ಹೀರೋನನ್ನಾಗಿಯೇ ನೋಡುತ್ತಿದ್ದಾರೆ.

-ಹ್ಯಾಕರ್ ಜಾಬ್ಸ್
ಆ್ಯಪಲ್ ಸಂಸ್ಥೆಯ ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ ಹಾಗೂ ಸ್ಟೀವ್ ವಾಜ್ನಿಕ್ ಉಚಿತ ಎಸ್‌ಟಿಡಿ ಕರೆಗಳನ್ನು ಮಾಡಲು ಹ್ಯಾಕಿಂಕ್ ತಂತ್ರ ಅನುಸರಿಸಿದ್ದರು.