ನಿಜ ದೇಶ ಬದಲಾಗುತ್ತಿದೆ..!! #prasann Oursang


ನಿಜ ದೇಶ ಬದಲಾಗುತ್ತಿದೆ..!

ಯಾಕೆ? ಹೇಗೆ ಎನ್ನುವ ಪ್ರಶ್ನೆಗಳು ನಿಮ್ಮ ಮನದಲ್ಲಿ ಕಾಡುತ್ತಿರಬಹುದು ಹೌದಲ್ಲವೇ? 

ನನ್ನ ಹಿಂದಿನ Status ಗಳನ್ನು ನೋಡಿ ನಿಮಗೆ ತೆಲೆಯಲ್ಲಿ ನೂರೆಂಟು ವಿಚಾರಗಳು ಬಂದಿರುವುದು ಸಾಮಾನ್ಯ. ಇಷ್ಟು ದಿನ ಹಣ, ಹೆಂಡದ ಅಮಲಿನಲ್ಲಿ ಸಾಕಷ್ಟು ಜನ ನಾಯಕರು ಕತಾಲ್ ರಾತ್ರಿಯಲ್ಲಿ ಮುಗ್ಧ ಜನರನ್ನು ತಮ್ಮತ್ತ ಸೆಳೆದುಕೊಂಡು ಗೆದ್ದು ಬಂದಿರುವ ಅನೇಕ ಉದಾಹರಣೆಗಳು ನಮ್ಮ ಮದ್ಯದಲ್ಲಿ ಇವೆ...

ಈಗ ಕಾಲ ಬದಲಾಗಿದೆ, ಮಹಾ ಭಾರತಕ್ಕೆ ಅರ್ಜುನನ ರಥದ ಸಾರಥಿಯಂತೆ ದೇಶಕ್ಕೂ ಒಬ್ಬ ಅಸಾಮಾನ್ಯ ವ್ಯಕ್ತಿ ಸಿಕ್ಕಿದ್ದಾರೆ.. ದೇಶವಷ್ಟೇ ಅಲ್ಲಾ ಜಗತ್ತೆ ಮೆಚ್ಚುವಂತ ಧೀಮಂತ ನಾಯಕ ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯವೇ ಸರಿ. 

ವಿಷಯಕ್ಕೆ ಬರುತ್ತೇನೆ, ಮುಂಬರುವ ಚುನಾವಣೆಗಳಲ್ಲಿ ಯಾವ ರೀತಿ ಹಣದ ಹೊಳೆ ಹರಿಯುವುದಕ್ಕೆ ಮೋದಿಜಿಯವರು ಆಣೆಕಟ್ಟು ಕಟ್ಟಿದ್ದಾರೆಂದರೆಯಾವುದೋ ಪಕ್ಷದ ನಾಯಕರಿಗೂ ಮತದಾರರಿಗೆ ಹಣದ ಆಸೆ ತೋರಿಸಿ ತಮ್ಮತ್ತ ಸೆಳೆಯಲು ಬರಬಾರದು ಆ ರೀತಿ ಭದ್ರವಾದ ಆಣೆಕಟ್ಟಣ್ಣೆ ನಮ್ಮ ಮೋದಿಜಿ ಕಟ್ಟಿದ್ದಾರೆ..

ಅದೇನಂದರೇ.. 

ಚುನಾವಣೆ ಸಮೀಪಿಸುತ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿಜಿ.. 

"ಚುನಾವಣೆಯ ಸಂಧರ್ಬದಲ್ಲಿ ದೇಶದ ಎಲ್ಲ ರಾಜಕಾರಣಿಗಳ ಬ್ಯಾಂಕ್ ಅಕೌಂಟ್ ಮುಟ್ಟುಗೊಳು( ಸೀಜ್) ಮಾಡುತ್ತಾರೆ..!! ಬರಿ ಸೀಜ್ ಅಲ್ಲಾ IT ಇಲಾಖೆ ಎಲ್ಲ ರಾಜಕೀಯ ನಾಯಕರ ಅಕೌಂಟ್‌‌ನ ಮೇಲೆ ಹದ್ದಿನ ಕಣ್ಣಿರಿಸಿ ಅದಕ್ಕೆ ಸಂಭಂದಿಸಿದ ಮಾಹಿತಿಯನ್ನು ಕ್ಷಣ ಕ್ಷಣಕ್ಕೂ ಕಳೆ ಹಾಕುತ್ತಾರೆ..!! ಅಂದರೆ ಒಬ್ಬ ರಾಜಕಾರಣಿಯ ಬ್ಯಾಂಕ್ ಖಾತೆಗೆ ಎಷ್ಟು ದುಡ್ಡು ಜಮವಾಯಿತು, ಯಾರಿಂದ ಜಮಾ ಆಯಿತು, ಯಾಕೆ ಜಮಾ ಆಯಿತು & ಯಾರಿಗೆ ಯಾವ ಕಾರಣಕ್ಕಾಗಿ ಹಣ ವರ್ಗಾಯಿಸಲಾಯಿತು ಎಂಬುದರ ಮೇಲೆ ಸಂಪೂರ್ಣ ನಿಗಾವಹಿಸಲಿದೆ..!

ಇಷ್ಟೇಲ್ಲಾ ವಿಚಾರಗಳು ಮೋದಿಜಿಯ ತೆಲೆಯಲ್ಲಿ ನಿತ್ಯ ಓಡಾಡುತ್ತಿವೆ, ಇದು ಕಾರ್ಯರೂಪಕ್ಕೆ ಬರುವುದು ಅಷ್ಟು ಸುಲಭದ ಮಾತಲ್ಲಾ ಅದಕ್ಕೆ ದೇಶಭಕ್ತ ಭಾರತೀಯರ ನೆರವಿನ ಹಸ್ತ ಅತ್ಯವಶ್ಯಕ. 

ನಾವು ಮಾಡ ಬೇಕಾಗಿರುವುದು ಇಷ್ಟೇ ಮೋದಿಜಿಗೆ ಬೆನ್ನೆಲುಬಾಗಿ ನಿಲ್ಲೋದು. ಯಾವ ರೀತಿ ಅಂತಿರಾ? ಈಗ ಕರ್ನಾಟಕ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಸಮೀಪಿಸುತ್ತಿದೆ ಅಲ್ಲವೇ? ನಾವು ಈಗ ರಾಷ್ಟ್ರೀಯತೆಯನ್ನು ಗೌರವಿಸುವ ಭಾಜಪ ಪಕ್ಷವನ್ನು ಪ್ರಚಂಡ ಬಹುಮತದಿಂದ ಆರಿಸಿ ಭಾಜಪದ ಶಕ್ತಿಯನ್ನು ಹೆಚ್ಚಿಸಿಬೇಕು ಅಂದರೆ ನಾವು ಆರಿಸಿ ತರುವ ನಾಯಕರು ರಾಜ್ಯಸಭೆಯ ನಾಯಕರನ್ನು ಆರಿಸುತ್ತಾರೆ, ಒಂದು ಸರಕಾರ ಕಾನೂನಿನಲ್ಲಿ ತಿದ್ದುಪಡಿಯನ್ನು ಮಾಡಬೇಕಾದರೆ ರಾಜ್ಯಸಭೆಯಲ್ಲಿ 362+ ಕ್ಕಿಂತ ಹೆಚ್ಚಿನ ಮತಗಳ ಅವಶ್ಯಕತೆ ಇದೆ. ಉದಾಹರಣೆಗೆ ಕಾಶ್ಮೀರದ 370 act. ನಾವು ಇವಾಗ ಮೋದಿಜಿಯವರಿಗೆ ದೇಶವನ್ನು ನಡೆಸುವ ಅಧಿಕಾರವನ್ನು ಮಾತ್ರ ಕೊಟ್ಟಿದ್ದೇವೆ ಆದರೂ ಅವರು ದೇಶದ ಹೆಸರನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸುತ್ತಿದ್ದಾರೆ.. ಒಂದು ವೇಳೆ ನಾವು ದೇಶದ ಕಾನೂನಿನಲ್ಲಿರುವ ಕೆಲ ತೊಡಕುಗಳನ್ನು ನಿವಾರಿಸುವ ಶಕ್ತಿ ಕೊಟ್ಟರೆ ಆ ಪುಣ್ಯಾತ್ಮ ಇನ್ನೆಷ್ಟು ಉತ್ಸಾಹದಿಂದ ದೇಶದ ಧಿಕ್ಕನ್ನೂ ಬದಲಿಸಬಹುದು? 

ಕೊನೆಯದಾಗಿ.. ಒಂದು ಅವಧಿಯಲ್ಲೇ ಇಷ್ಟೊಂದು ಬದಲಾವಣೆ ತಂದಿರುವ ಮೋದಿ ಇನ್ನೊಂದು ಅವಧಿಗೆ ಪ್ರಚಂಡ ಬಹುಮತದಿಂದ(362+) ಆರಿಸಿ ತಂದರೆ ಇನ್ನೆಷ್ಟು ಕೆಲಸ ಮಾಡಬಾರದು? 

ಯೋಚಿಸಿ... ಮುಂಬರುವ ಎಲ್ಲ ಚುನಾವಣೆಯಲ್ಲಿ ರಾಷ್ಟ್ರೀಯತೆಗೆ ಗೌರವಿಸುವ ಭಾಜಪ ಪಕ್ಷವನ್ನು ಗೆಲ್ಲಿಸಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ... 

ಬರಹ - ಪ್ರಸನ್ನ ಮ ಔರಸಂಗ