ಭೀಮಾಕೋರೆಗಾವ್ ಗಲಭೆಯ ಅಸಲಿಯತ್ತು ಏನು ಗೊತ್ತೆ ? ಎಲ್ಲರನ್ನು ಒಂದೂಗೂಡಿಸಲು ಪ್ರಯತ್ನಿಸುವಾಗ ಶೂದ್ರರೆಂದು ಬೇರ್ಪಡಿಸುತ್ತ ಭಾರತೀಯ ಭೀಮನ ಸಂವಿಧಾನಕ್ಕೆ ಅಪಚಾರವೆಸಗುವ ಜನರ ಬಗ್ಗೆ ಎಚ್ಚರದಿಂದಿರಿ.!!!

ಓ,#ನನ್ನ_ದಲಿತ_ಸಹೋದರ_ಸಹೋದರಿಯರೇ...
ಮತ್ತು #ಹಿಂದೂ_ಯೋಧರೇ....
ನಿಮಗೆ ಮಹಾರಾಷ್ಟ್ರದಲ್ಲಿ ನಡೆದ ಗಲಭೆಯ ನೈಜ ಚಿತ್ರಣ ಬೇಕಾದರೇ ಈ ಬರಹ ಪೂರ್ತಿ ಓದಿ.

#ಕೋರೆಗಾಂವ್_ವೀರರಿಗೂ ಈ #ಹರಾಮಕೋರರಿಗೂ_ಎತ್ತಣದಿಂದೆತ್ತ_ಸಂಬಂಧ....?

#ಮಹಾರಾಷ್ಟ್ರ ಒಮ್ಮೆ ಹೊತ್ತಿ ಉರಿಯಿತು. ಬೆಂಕಿ ಹಚ್ಚಿಹೋದ ಗುಳ್ಳೆನರಿಗಳು ದೂರದಲ್ಲಿ ಕುಳಿತು ಮಜಾ ನೋಡುತ್ತಿರಬಹುದು. ಹಿಂದೂ ಸಮಾಜವನ್ನು ಒಡೆಯುವ ಎಡಪಂಥೀಯರ ಧೀರ್ಘ ಕಾಲದ ಕಾರ್ಯತಂತ್ರಗಳಲ್ಲಿ ಈ ಭೀಮಾ ಕೋರೆಗಾಂವ್ ಗಲಾಟೆಯೂ ಒಂದು
ಕೋರ್ ಗಾಂವ್ ಯುದ್ಧದಲ್ಲಿ ಎರಡನೇ ಬಾಜಿರಾಯ ಕಾಲಿಗೆ ಬುದ್ಧಿ ಹೇಳುವಂತೆ ಮಾಡಿದ್ದ ಐದುನೂರು  ಮಾಹರ್ ವೀರರ ಬಗ್ಗೆ ನನಗಿದ್ದ ಗೌರವ ಇಂದು ಮಣ್ಣುಪಾಲಾಯ್ತು . ನರನಾಡಿಗಳಲ್ಲಿ ದೇಶದ್ರೋಹವನ್ನೇ ತುಂಬಿಕೊಂಡಿರುವ #ಉಮರ್ #ಖಾಲೀದ್ ಮತ್ತು #ಜಿಗ್ನೇಶ್_ಮೆವಾನಿ ಎಂಬ ಕ್ರಿಮಿಯನ್ನು ಪುಣೆಗೆ ಕರೆಸಿ ಇಂದಿನ ಮಾಹರ್ ಸಮಾಜದ ನಾಯಕರು ತಮ್ಮ ಪೂರ್ವಜರ ಗೌರವಶಾಲಿ ಇತಿಹಾಸಕ್ಕೆ ಮಸಿ ಬಳಿದು ಬಿಟ್ಟರು.

ಮರಾಠಾ ಇತಿಹಾಸದ ಸಣ್ಣ ಬಿರುಕಿಗೆ ಸಿಡಿಮದ್ದು ಇಟ್ಟು ಸ್ಪೋಟಿಸಿ ಅಲ್ಲಿನ #ದಲಿತರನ್ನು_ಬ್ರಾಹ್ಮಣರ ವಿರುದ್ಧ ಎತ್ತಿಕಟ್ಟಿ ಮಜಾ ನೋಡುತ್ತಿರುವವರು ಈ ದರ್ವೇಸಿ ಖಾಲಿದ್, ಮೆವಾನಿ ಮತ್ತು ಅವರ ಸಂಗಡಿಗರು. ಅಷ್ಟಕ್ಕೂ ಭೀಮಾ ಕೋರೆಗಾಂವ್ ಯುದ್ಧದ ಇತಿಹಾಸಕ್ಕೂ  ಈ ವೈಚಾರಿಕ ಹಾದರ ನಡೆಸುವವರಿಗೂ ಎತ್ತಣದ ಸಂಬಂಧ..?

ನಿನ್ನೆ ಮೊನ್ನೆಯವರೆಗೆ #ಶಿವಾಜಿ_ಸಂಭಾಜಿಯವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದವರು, ದರೋಡೆಕೋರ, ಹೇಡಿ ಸಮಯಸಾಧಕ ಎಂದು ಹೀಯಾಳಿಸುತ್ತಿದ್ದ  ಕಮ್ಯುನಿಸ್ಟ್ ಚಿಂತಕರು ಈಗ ಇದ್ದಕ್ಕಿದ್ದಂತೆ ಶಿವಾಜಿಯ ಭಜನೆಯಲ್ಲಿ ತೊಡಗಿದ್ದಾರೆ. ಕಾರಣವಿದೆ.
#ಶಿವಾಜಿಯ_ಬಗ್ಗೆ_ಇರುವ_ಜನಾದರವನ್ನು_ಕಂಡು_ಈ_ಗೊಸುಂಬೆಗಳು_ಬೆಚ್ಚಿಬಿದ್ದಿವೆ.
ಬೈದರೆ ಹಲ್ಲು ಉದುರುವುದು ಖಚಿತ ಎಂದು ತಿಳಿದ ಮೇಲೆ ಶಿವಾಜಿಯನ್ನು ತಮ್ಮ ತೆಕ್ಕೆಗೆ ಇಳಿಸಿಕೊಳ್ಳಲು ನೋಡುತ್ತಿದ್ದಾರೆ. ಈ ಪ್ರಯೋಗವನ್ನು ಮೊದಲು ಮಾಡಿದವರು ಕಮ್ಯುನಿಷ್ಟ್ ನಾಯಕ  ಗೋವಿಂದ ಪನ್ಸಾರೆ ಅವರು. ಶಿವಾಜಿ ಬಡವರ, ಶ್ರಮಿಕರ, ರೈತರ ನಾಯಕನಾಗಿದ್ದ. ಆತನ ಸೈನ್ಯದಲ್ಲಿ ಮುಸಲ್ಮಾನರಿದ್ದರು ಆತ ಮುಸ್ಲಿಮ್ ದ್ವೇಷ ಹೊಂದಿರಲಿಲ್ಲ. ಆತ ಹಿಂದೂ ನಾಯಕ ಎನ್ನುವುದು ದೊಡ್ಡ ತಪ್ಪು ಅಂತ ಅವರು ವಾದಿಸುತ್ತಿದ್ದರು.

ಸ್ವಾಮಿ ವಿವೇಕಾನಂದರನ್ನೂ ಇದೇ ರೀತಿ ನಮ್ಮವ ಎನ್ನಲು ಕಮ್ಯುನಿಸ್ಟರು ಮುಂದಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ  ಸಂಘಪರಿವಾರ ಮೊತ್ತಮೊದಲ ಬಾರಿಗೆ ಭಗತ್ ಸಿಂಗ್  ಅವರ ಕ್ರಾಂತಿ ಸಂದೇಶಗಳು ಯುವಕರಿಗೆ ತಲುಪುವಂತೆ ಮಾಡಿತು. ಇದರ ಫಲವಾಗಿ ಆತ ಯುವಕರ ಕಣ್ಮಣಿಯಾದ. ತಕ್ಷಣವೇ ಕಮ್ಯುನಿಸ್ಟ್‌ ಪ್ರಭೃತಿಗಳು ಪ್ರತ್ಯಕ್ಷರಾಗಿ ಬಿಟ್ಟರು. ಭಗತ್ ಸಿಂಗ್ ನಮ್ಮ ಅಪ್ಪನ ಆಸ್ತಿ ಎಂಬಂತೆ ವಾದ ಮಂಡಿಸತೊಡಗಿದರು. ಈಗ ಶಿವಾಜಿಯ ಸರದಿ.

#ಮಹಾರಾಷ್ಟ್ರದ_ಮೂಲ_ನಿವಾಸಿಗಳು_ಮಾಹರ್_ಜನಾಂಗದವರು. ಕಾಡು ಗುಡ್ಡಗಳಲ್ಲಿ ಬದುಕುತ್ತಿದ್ದ ಇವರದ್ದು ಶ್ರಮಜೀವನ. ರಕ್ತದಲ್ಲೇ ಹೋರಾಡುವ ಗುಣವನ್ನು ಮೈಗೂಡಿಸಿಕೊಂಡು ಬಂದವರು ಇವರು. ಈ ಮಾಹರ್ ವೀರರ ನೆರವಿನಿಂದಲೇ ಶಿವಾಜಿ ಮಹಾರಾಜರು ಕೋಟೆಗಳ ತೋರಣ ಹೆಣೆದು ಸ್ವರಾಜ್ಯ ಲಕ್ಷ್ಮಿ ಗೆ ವಿಜಯಮಾಲೆ ಅರ್ಪಿಸಿದ್ದು. ಸುತ್ತಮುತ್ತಲಿನ ಮುಸ್ಲಿಂ ರಾಜ್ಯಗಳನ್ನ ಬಗ್ಗು ಬಡಿದಿರೋದು. ಶಿವಾಜಿ ಭೋಸ್ಲೆಯ ಕಾಲದಲ್ಲಿ ಮಾಹರ್ ಜನಾಂಗದ ಸಾಕಷ್ಟು ವೀರರು ಮರಾಠ ಸೇನೆಯ ಆಯಕಟ್ಟಿನ ಸ್ಥಳಗಳಲ್ಲಿದ್ದರು. ಸಹ್ಯಾದ್ರಿಯ ದುರ್ಗಮ ಬೆಟ್ಟಗಳಲ್ಲಿ ಸೆಣಸುವುದೆಂದರೆ ಮಾಹರ್ ವೀರರಿಗೆ ತಾಯಿಯ ಮಡಿಲಲ್ಲಿ ಮಗು ಆಟವಾಡಿದಷ್ಟೇ ಸಲೀಸು.

#ಶಿವಾಜಿಯ ಕಾಲ ನಂತರ ಅವರ ಮಗ #ಸಂಭಾಜಿಯನ್ನು_ಔರಂಗಜೇಬ್ ಮೋಸದಿಂದ ಹಿಡಿದು ಬರ್ಬರವಾಗಿ ಕೊಂದು ಶವವನ್ನು ಛಿದ್ರ ಛಿದ್ರಗೊಳಿಸಿ ಇಂದ್ರಾಯಣಿ ನದಿಗೆ ಎಸೆದು ಬಿಟ್ಟ. ರಾಜಾಜ್ಞೆಗೆ ಹೆದರಿ ಯಾರೂ ಸಂಭಾಜಿಯ ಶವವನ್ನು ಮುಟ್ಟಲಿಲ್ಲ. ಆಗ ಮಾಹರ್ ಕೇರಿಯ ಗೋವಿಂದ ಮಾಹರ್ ಮತ್ತು ಸಂಗಡಿಗರು ನದಿಯಿಂದ ಮಾಂಸದ ಚೂರುಗಳನ್ನು ಒಟ್ಟು ಮಾಡಿ ಮೂಟೆಕಟ್ಟಿ ಅಂತ್ಯ ಸಂಸ್ಕಾರ ಮಾಡಿದರು.ಮಾಹರ್ ವಾಡೆಯಲ್ಲಿ ಇಂದಿಗೂ ಸಂಭಾಜಿಯ ಸಮಾಧಿ ಇದೆ. ಮಾಹರ್ ಸಮುದಾಯಕ್ಕೆ ಭೋಸ್ಲೆ ರಾಜ ವಂಶದ ಬಗ್ಗೆ ಅಪರಿಮಿತವಾದ ನಿಷ್ಟೆಯಿತ್ತು. ಆದರೆ ಭೋಸ್ಲೆಗಳ ಪ್ರಭಾವ ಕುಸಿದು ಅವರ ಪ್ರಧಾನ ಮಂತ್ರಿಗಳಾದ ಬ್ರಾಹ್ಮಣ ಪೇಶ್ವಾಗಳ ಆಳ್ವಿಕೆ ಆರಂಭವಾಗುತ್ತಿದ್ದಂತೆ ಮಾಹರ್ ಸಮಾಜ ತೀವ್ರವಾದ ಸಾಮಾಜಿಕ ಅಸ್ಪೃಶ್ಯತೆಗೆ ತುತ್ತಾಯಿತು.

ವರ್ಣ ವ್ಯವಸ್ಥೆಯ ಕಬಂಧ ಬಾಹುಗಳು ಮಹಾರಾಷ್ಟ್ರದ ಹಿಂದೂ ಸಮಾಜವನ್ನು ಆವರಿಸಿಕೊಂಡಿತು. ನಿನ್ನೆಮೊನ್ನೆಯವರೆಗೆ ಕತ್ತಿ ಝಳಪಿಸುತ್ತಿದ್ದ ಮಾಹರರು ಪೇಶ್ವಾಗಳ ಕಣ್ಣಿಗೆ ಶೂದ್ರರಾಗಿ ಕಂಡರು. ಅವಮಾನ ಆರಂಭವಾಯಿತು. ಪೇಶ್ವಾ ಬಾಜಿರಾವ್ ಕಾಲದಲ್ಲಿ ಈ ಜಾತಿಯ ಪಿಡುಗು ಕಾಣಿಸಿಕೊಂಡಿರಲಿಲ್ಲ. ಆಗ ಕಟ್ಟರ್ ಬ್ರಾಹ್ಮಣಶಾಹಿ ಪುಣೆಯಲ್ಲಿ ಮಡುಗಟ್ಟುತ್ತಿತ್ತಷ್ಟೆ. ಆಯಕಟ್ಟಿನ ಅಧಿಕಾರ ಸ್ಥಾನಗಳೆಲ್ಲಾ ಸ್ವಾಭಾವಿಕವಾಗಿ ಚಿತ್ಪಾವನ ಬ್ರಾಹ್ಮಣರ ಪಾಲಾಯಿತು. ಪ್ರಖರ ಹಿಂದೂವಾದಿಯಾಗಿದ್ದ, ಜಾತಿಗೆ ಮಹತ್ವವನ್ನು ನೀಡದ ಉದಾರವಾದಿ ಪೇಶ್ವೆ  ಮೊದಲ ಬಾಜಿರಾಯನಿಗೂ ಇದರ ಬಿಸಿ ತಟ್ಟಿತ್ತು. ಈತನ ಮುಸ್ಲಿಂ ಪತ್ನಿ ಮಸ್ತಾನಿಯಿಂದ ಹುಟ್ಟಿದ ಮಗನಿಗೆ ಪುಣೆಯ ಬ್ರಾಹ್ಮಣರು ಉಪನಯನ ಮಾಡಲು ಒಪ್ಪಲಿಲ್ಲ .ಆತನಿಗೆ ಹಠಕ್ಕೆ ಬಿದ್ದ  ಬಾಜಿರಾಯ ಸಂಶೇರ್ ಬಹಾದ್ದೂರ್ ಎಂದು ನಾಮಕರಣ ಮಾಡಿದ. ಪಾಣಿಪತ್ ಯುದ್ಧದಲ್ಲಿ ಮರಾಠರ ಪರವಾಗಿ ಹೋರಾಡಿ ಸತ್ತ ಈ ಬಾಲಕನನ್ನು ಬಾಜಿರಾವ್ ಕುಟುಂಬಸ್ಥರು ಕೊನೆಯವರೆಗೂ ನಮ್ಮವನೆಂದು ಒಪ್ಪಿ ಕೊಳ್ಳಲಿಲ್ಲ.

ಈ ಕರ್ಮಠ ಬ್ರಾಹ್ಮಣ ಆಳ್ವಿಕೆಯು ಯಾವ ಮಟ್ಟ ಮೀರಿತೆಂದರೆ  1818ರ ಸುಮಾರಿಗೆ ಎರಡನೇ ಬಾಜಿರಾವ್ ಅವಧಿಯಲ್ಲಿ ಮಾಹರ್ ಜನಾಂಗ ಆಯುಧ ಹಿಡಿಯುವಂತಿರಲಿಲ್ಲ . ಸಾರ್ವಜನಿಕ ಕೆರೆ ಕಟ್ಟೆಗಳ ಬಳಿ ಸುಳಿಯುವಂತಿರಲಿಲ್ಲ. ಬೀದಿಗೆ ಬರುವಾಗ ಸೊಂಟಕ್ಕೆ ಪೊರಕೆ ಮತ್ತು ಕುತ್ತಿಗೆಗೆ ಗೆರಟೆ ಕಟ್ಟಿಕೊಂಡು ಬರಬೇಕಿತ್ತು. ಎಂತಹ ಅಪಮಾನ..?

ಈ ಶೋಷಣೆಯ ವಿರುದ್ಧ ಮಾಹರ್ ಜನಾಂಗ ತಿರುಗಿ ಬಿತ್ತು. ಅದಾಗಲೇ ಮರಾಠಾ ಸಾಮ್ರಾಜ್ಯವನ್ನು ಕಬಳಿಸಲು ಬ್ರಿಟಿಷ್ ಸೈನ್ಯ ಹೊಂಚು ಹಾಕಿ ಕುಳಿತಿತ್ತು. ಸಹಾಯಕ ಸೈನಿಕ ಪದ್ಧತಿಯ ನೆಪದಲ್ಲಿ ಬ್ರಿಟಿಷ್ ಸೇನೆ ಬಾಜಿರಾಯನ ಶನಿವಾರವಾಡೆಯ ಅರಮನೆಯಲ್ಲಿ ಬೀಡು ಬಿಟ್ಟು ವರ್ಷಗಳೇ ಕಳೆದಿತ್ತು. ಭಾರತದ ಬಹುತೇಕ ಸಣ್ಣಪುಟ್ಟ ರಾಜ್ಯಗಳನ್ನು ನುಂಗಿ ನೀರುಕುಡಿದಿದ್ದ ಅಂಗ್ರೇಜಿಗಳಿಗೆ ವಿಶಾಲವಾದ ಮರಾಠಾ ಸಾಮ್ರಾಜ್ಯವನ್ನು ಕೈವಶ ಮಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಮಹಾ ವಿಷಯಲಂಪಟನಾಗಿದ್ದ ಎರಡನೇ ಬಾಜಿರಾಯನ ಮೇಲೆ ಯುದ್ಧ ಹೂಡಲು ಬ್ರಿಟಿಷರಿಗೆ ಒಂದು ನೆಪ ಬೇಕಿತ್ತು. ಎರಡನೇ ಬಾಜಿರಾಯ ಅದಾಗಲೆ ಮೈತುಂಬಾ ಶತ್ರುಗಳನ್ನು ಸೃಷ್ಟಿಸಿಕೊಂಡಿದ್ದ. ದುಡ್ಡಿಗಾಗಿ ಊರು ಗ್ರಾಮಗಳನ್ನೇ ಹೊರಗುತ್ತಿಗೆ ಕೊಡುವ ಮಟ್ಟಕ್ಕೆ ಇಳಿದಿದ್ದ ಪೇಶ್ವೆಯ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟಿತ್ತು. ಮೊದಲನೇ ಬಾಜಿರಾಯನಿಗೆ ಸಂಪೂರ್ಣ ತದ್ವಿರುದ್ಧವಾಗಿತ್ತು ಈ ಎರಡನೇ ಬಾಜಿರಾಯನ ಸ್ಥಿತಿ.

 ಮರಾಠ ಸಾಮ್ರಾಜ್ಯದ ಅಡಿಗಲ್ಲುಗಳೇ ಆಗಿದ್ದ ಹೋಳ್ಕರ್, ಸಿಂಧಿಯಾ, ಗಾಯಕ್ವಾಡ್, ಮೊದಲಾದವರು ಬಾಜಿರಾಯನ ಬದ್ಧವೈರಿಗಳಾಗಿ ಬಿಟ್ಟಿದ್ದರು.ಅಖಂಡ ಭಾರತವನ್ನು ಒಂದು ಮಾಡುವ ಕನಸು ಕಂಡಿದ್ದ ಪೇಶ್ವೆಗಳ ಸಾಮ್ರಾಜ್ಯ ಆಂತರಿಕ ಕಲಹದಿಂದ ಗೆದ್ದಲು ಹಿಡಿದು ಟೊಳ್ಳಾದ ವಿಶಾಲ ವೃಕ್ಷ ದಂತೆ ನಿಂತಿತ್ತು ಅದನ್ನು ಉರುಳಿಸಲು ಒಂದು ಅಂತಿಮ ಪ್ರಹಾರದ ಅಗತ್ಯವಿತ್ತು.

 ಆಗ ಬ್ರಿಟೀಷರ ಕಣ್ಣಿಗೆ ಬಿದ್ದವನೇ ಪ್ರತಾಪ ಭೋಸ್ಲೆ.. ಈತ ಶಿವಾಜಿ ವಂಶಸ್ಥ. ಬಾಜಿರಾಯನ ಪೂರ್ವಜರು ಶಿವಾಜಿ ವಂಸ್ಥರಿಂದ ಅನ್ಯಾಯವಾಗಿ ಕಸಿದುಕೊಂಡ ಗದ್ದುಗೆಯಲ್ಲಿ ನಾವು ಈತನನ್ನು ಸ್ಥಾಪಿಸಲು ಹೊರಟಿದ್ದೇವೆ ಎಂದು ಬ್ರಿಟಿಷ್ ದೊರೆಗಳು ಮಹಾರಾಷ್ಟ್ರ ದಲ್ಲಿ  ಪುಕಾರು ಹಬ್ಬಿಸಿದರು. ಶಿವಾಜಿ ವಂಶಕ್ಕೆ ನಿಷ್ಠೆ ಹೊಂದಿದ್ದ ಮಹಾರ್ ಜನಾಂಗ ಈ ಸಂದರ್ಭದಲ್ಲಿ ಬ್ರಿಟಿಷ್ ಸೇನೆಯನ್ನು ಸೇರಿಕೊಂಡಿತು. ಆಗ ಮಾಹರ್ ವೀರರ ನಾಯಕತ್ವ ವಹಿಸಿದ್ದವನು ಸಿದ್ದನಾಗ್ ಮಾಹರ್.

ಎಷ್ಟೋ ವರ್ಷಗಳ ಬಳಿಕ ಮಾಹರ್ ಜನಾಂಗಕ್ಕೆ ಕತ್ತಿ ಹಿಡಿದು ಪೌರುಷ ಮೆರೆಯುವ ಅವಕಾಶ ಸಿಕ್ಕಿತು. ವರ್ಷಾನುಗಟ್ಟಲೆ ತನ್ನ ಜಾತಿಜನಾಂಗದ ಮೇಲೆ ನಡೆಸಲಾದ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುಲು ಪ್ರತಿಯೊಬ್ಬ ಮಹಾರ್ ವೀರನೂ ತುದಿಗಾಲಲ್ಲಿ ನಿಂತಿದ್ದರು. ಅಪಮಾನದ ಬೆಂಕಿ ಅವರ ಎದೆಯಲ್ಲಿ ಉರಿಯುತ್ತಲೇ ಇತ್ತು.

ಇಷ್ಟಾದರೂ ಸಿದ್ಧನಾಗ್ ಪೇಶ್ವಾ ಸರದಾರರನ್ನು ಭೇಟಿಯಾಗಿ  ನಮಗೆ ಮರಾಠ ಸೇನೆಯಲ್ಲಿ ಅವಕಾಶ ನೀಡಿ ಬ್ರಿಟಿಷ್ ಸೈನ್ಯವನ್ನು ನಾವು ಬಗ್ಗು ಬಡಿಯುತ್ತೇವೆ ನಿಮ್ಮ ವಿರುದ್ಧ ಹೋರಾಡಲು ನಮಗೆ ಮನಸ್ಸಿಲ್ಲ. ನಮ್ಮ ಮೇಲೆ ಹೇರಲಾದ ಸಾಮಾಜಿಕ ಬಹಿಷ್ಕಾರ ವನ್ನು ತೆಗೆದುಹಾಕಿ ಎಂದು ಮನವಿ ಮಾಡಿದ್ದ. ಆದರೆ ಬ್ರಾಹ್ಮಣ್ಯದ ಅಮಲಿನಲ್ಲಿ ವಾಸ್ತವವನ್ನು  ಮರೆತಿದ್ದ ಎರಡನೇ ಬಾಜಿರಾಯ ಸಿದ್ಧನಾಗನನ್ನು ಅಪಮಾನಿಸ ಕಳುಹಿಸಿದ. ಇದರಿಂದಾಗಿ ರಾಷ್ಟ್ರದ ಪರವಾಗಿ ನಿಲ್ಲಬೇಕಾಗಿದ್ದ ಮಾಹರ್ ವೀರರು ಅನಿವಾರ್ಯವಾಗಿ ಬ್ರಿಟಿಷರ ಜೊತೆ ಸೇರಿಕೊಂಡರು.

ದಿನಾಂಕ 1.1.1818 ಐನೂರರಷ್ಟಿದ್ದ ಮಾಹರ್ ವೀರರು ಕಾಡು ಗುಡ್ಡಗಳನ್ನು ಹತ್ತಿ ಇಳಿದು ಇಪ್ಪತೈದು ಮೈಲಿಯ ದುರ್ಗಮ ಹಾದಿ ನಡೆದು ಭೀಮಾ ನದಿ ತೀರದ ಕೋರೆಗಾಂವ್ ತಲುಪಿದರು. ಇನ್ನೂರೈವತ್ತು ಕುದುರೆಸವಾರರು ಮತ್ತು ಒಂದು ತೋಪು ಇವರ ಬಳಿ ಇತ್ತು. ಈ ತುಕುಡಿಯನ್ನು ಕ್ಯಾಪ್ಟನ್ ಸ್ಟೂಟನ್ ಮುನ್ನಡೆಸುತ್ತಿದ್ದ.

ಪೇಶ್ವೆ ಗಳ ಸೈನ್ಯ ಸುಮಾರು ಇಪ್ಪತೈದು ಸಾವಿರದಷ್ಟಿತ್ತು. ಅದರ ನೇತೃತ್ವವನ್ನು ಸ್ವತಃ ಎರಡನೇ ಬಾಜಿರಾಯ ಬಾಪು ಗೋಖಲೆ ಅವನ ಮಗ ತ್ರ್ಯಂಭಕ್ ಗೋಖಲೆ, ಮಿಂಚುಲ್ಕರ್ ವಹಿಸಿಕೊಂಡಿದ್ದರು. ಕೊರೆಗಾಂವ್ ನಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ ಮಾಹರ್ ಜನಾಂಗದ ದಶಕಗಳಿಂದ ಮಡುಗಟ್ಟಿದ್ದ ಆಕ್ರೋಶ ಜ್ವಾಲಾಮುಖಿಯಾಗಿ ಸಿಡಿಯಿತು. ಇಪ್ಪತೈದು ಸಾವಿರದ ಪೇಶ್ವಾಗಳ ಸೇನೆಯನ್ನು ಬರಿಗಾಲ ಮಾಹರ್ ಸಿಪಾಯಿಗಳು ಲೀಲಾಜಾಲವಾಗಿ ಚೆಂಡಾಡಿದರು. ಎರಡನೇ ಬಾಜಿರಾಯ ರಣರಂಗಕ್ಕೆ ಬೆನ್ನುಹಾಕಿ ಓಡಿ ಬ್ರಿಟೀಷ್ ಅಧಿಕಾರಿ ಮಾಲ್ಕನ್ ಮುಂದೆ ಶರಣಾಗಿ ಒಪ್ಪಂದ ಮಾಡಿಕೊಂಡ. ಅಂದಿನಿಂದ ಅವನಿಗೆ ಬಾಗೋ ಬಾಜಿರಾಯ ಅಂತ ಅಡ್ಡ ಹೆಸರೂ ಹುಟ್ಟಿಕೊಂಡಿತು. ಕೋರೆಗಾಂವ್‌ನಲ್ಲಿ ಬ್ರಿಟೀಷರಿಗೆ ಜಯ ಲಭಿಸಲಿಲ್ಲ  ಬ್ರಿಟೀಷರ ಐದು ತುಕುಡಿಗಳು ಬಾಜಿರಾಯನ ಬೆನ್ನು ಬಿತ್ತು. ಒಪ್ಪಂದ ಆಗುವವರೆಗೆ ಅಲ್ಲಲ್ಲಿ ಸಣ್ಣಪುಟ್ಟ ಹೊಡೆದಾಟಗಳು ನಡೆದವು.

ಅದೇನೇ ಇರಲಿ ಭೀಮಾ ತೀರದಲ್ಲಿ ನಡೆದ ಈ ಯುದ್ಧ ಇಡೀ ಭಾರತದಲ್ಲಿ ಆಂಗ್ಲ ಸಾರ್ವಭೌಮತ್ವವನ್ನು ಸ್ಥಾಪಿಸಿದ ಯುದ್ಧ. ಹಿಂದೂ ಸಮಾಜವನ್ನು ಕುರದಂತೆ ಕಾಡುತ್ತಿರುವ ಅಸ್ಪೃಶ್ಯತೆ ಮತ್ತು ವರ್ಣ ವ್ಯವಸ್ಥೆಗೆ ಅತೀ ದೊಡ್ಡ ಬೆಲೆ ತೆತ್ತ ಯುದ್ಧವಿದು. ಒಮ್ಮೆ ಊಹಿಸಿಕೊಳ್ಳಿ ಪೇಶ್ವಾಗಳು ತಮ್ಮ ಬ್ರಾಹ್ಮಣಶಾಹಿ ಯನ್ನು ಪಕ್ಕಕ್ಕಿಟ್ಟು ಈ ಮಹಾರ ಸಮುದಾಯವನ್ನು ಗೌರವಿಸಿದಿದ್ದರೆ ಮಾಹರ್ ಜನಾಂಗದ ಕತ್ತಿಗಳು ರಾಷ್ಟ್ರಘಾತುಕ ಆಂಗ್ಲರ ಹೆಣ ಉರುಳಿಸುತ್ತಿದ್ದವು. ಪೇಶ್ವೆಗಳು ಮಾಡಿದ ಕರ್ಮ ತಿಂದರು. ಬಾಜಿರಾಯ ಬ್ರಿಟೀಷರು ಭಿಕ್ಷೆ ರೂಪದಲ್ಲಿ ನೀಡಿದ ಭಿಟೂರ್ ಎಂಬ ಪುಟ್ಟ ಗ್ರಾಮದಲ್ಲಿ ಕೊರಗಿ ಕೊರಗಿ ಸತ್ತ. ಜಾತಿವಾದಿ ಪೇಶ್ವೆಗಳಾದ ಚೀಮಾಜಿ ಅಪ್ಪಾ,ಮಾಧವರಾವ್ ಪೇಶ್ವೆ,ಬಾಲಾಜಿ ರಾವ್ ಪೇಶ್ವೆ,ರಘುನಾಥ ರಾವ್ ಪೇಶ್ವೆ ಇವರೆಲ್ಲಾ ಭಾರತದ ಇತಿಹಾಸದಲ್ಲಿ ಒಂದೊಂದು ಸಾಲಿಗಷ್ಟೇ ಸೀಮಿತರಾಗಿ ಹೋದರು. ಆದರೆ ಮಾಹರ್ ವೀರರ ಪೌರುಷಗಾಥೆಯನ್ನು ಸಾರುವ ವಿಜಯ ಸ್ಥಂಭ ಇಂದಿಗೂ ಕೋರೆಗಾಂವ್ ನಲ್ಲಿ ತಲೆ ಎತ್ತಿನಿಂತಿದೆ. ಬ್ರಿಟೀಷರು ಈ ಯುದ್ಧದ ಬಳಿಕ ಪ್ರತ್ಯೇಕ ಮಾಹರ್ ರೆಜಿಮೆಂಟ್ ರಚಿಸಿದರು. ಅಂಬೇಡ್ಕರ್ ಅವರ ತಂದೆ ಈ ರೆಜಿಮೆಂಟಿನಲ್ಲಿ ಕೆಲಸ ನಿರ್ವಹಿಸಿದ್ದರು. ಅಂಬೇಡ್ಕರ್ ಪ್ರತೀ ವರ್ಷ ಜನವರಿ ಒಂದನೇ ತಾರೀಕಿನಂದು ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ ಬರುತ್ತಿದ್ದರು. ಈ ವರ್ಷಕ್ಕೆ ಕೋರಗಾಂವ್ ಯುದ್ಧ ನಡೆದು ಬರೋಬ್ಬರಿ ಇನ್ನೂರು ವರ್ಷ ತುಂಬಿದೆ. ಆಚರಣೆ ಬಹಳ ಜೋರಾಗಿತ್ತು.

ದುರ್ದೈವದ ಸಂಗತಿ ಈ ಬಾರಿ ಅತಿಥಿಗಳಾಗಿ ಭಾಗವಹಿಸಿದವರು. ಜಿಗ್ನೇಶ್ ಮೇವಾನಿ ,ಉಮರ್ ಖಾಲಿದ್,  ಆತ್ಮಹತ್ಯೆ ಮಾಡಿಕೊಂಡು ಸುದ್ದಿಯಾದ ವೇಮುಲನ ತಾಯಿ ಮೊದಲಾದವರು..!

ಒಂದೆಡೆ ಇಂದಿಗೂ ದೇಶದ ಸೇವೆಯಲ್ಲಿ ತೊಡಗಿಕೊಂಡಿರುವ ಮಾಹರ್ ರೆಜಿಮೆಂಟ್ ಮತ್ತೊಂದು ಕಡೆ ಸೈನಿಕರೆಲ್ಲಾ ರೇಪಿಸ್ಟುಗಳು ಎಂದ ಉಮರ್ ಖಾಲಿದ್..!!
ಒಂದೆಡೆ ಕಣ್ಣುಕಿತ್ತು ಸುಣ್ಣ ತುಂಬಿ ಕಿವಿಗೆ ಕಾದ ಸೀಸ ಸುರಿದರೂ ಹಿಂದೂ ಧರ್ಮವನ್ನು ಬಿಡಲೊಪ್ಪದ ಸಂಭಾಜಿ ಮಹಾರಾಜರ ಹೆಸರಿಟ್ಟು ಕೊಂಡ ಸಂಭಾಜಿ ಬ್ರಿಗೇಡ್ .....
ಅವರ ಕಾರ್ಯಕ್ರಮದಲ್ಲಿ ಹಿಂದೂ ಧರ್ಮವನ್ನು ಅಳಿಸದೇ ಹೋದರೆ ದೇಶದ ದಲಿತರ ಕಲ್ಯಾಣ ಸಾಧ್ಯವಿಲ್ಲ ಎನ್ನುವ ಜಿಗ್ನೇಶ್ ಮೆವಾನಿ ಭಾಷಣ..!
ಒಂದೆಡೆ ಹರಹರ ಮಹಾದೇವ ಎಂದು ಯುದ್ಧಘೋಷ ಕೂಗುತ್ತ ಯುದ್ಧ ಗೆದ್ದ ಮಹಾರ ಸೈನಿಕರ ವಿಜಯಸ್ತಂಭ, ಮತ್ತೊಂದು ಕಡೆ ವೇದಿಕೆಯಲ್ಲಿ ಹಿಂದೂ ದೇವರುಗಳ ಹೆಸರೆತ್ತಿದರೆ ಮನುವಾದಿ ಪಟ್ಟ ಕೊಡುವ neoಬೌದ್ಧರು ಹಾಗು ಬುದ್ದಿಜೀವಿಗಳೆನಿಸಿಕೊಂಡವರೆ ಅತಿಥಿಗಳು...!


ಒಂದೆಡೆ ಕಾರ್ಯಕ್ರಮ ಆಯೋಜಕರಿಂದ ಶಿವಾಜಿ ಮಹಾರಾಜರ ಗುಣಗಾನ... ಅದೇ ವೇದಿಕೆಯಲ್ಲಿ ದುರ್ಗಾ ಮಾತೆಯನ್ನು ವೇಶ್ಯೆಯಂತೆ ಚಿತ್ರಿಸಿ ಕಾಲೇಜು ಕ್ಯಾಂಪಸಿನಲ್ಲಿ ಮಹಿಷಾಸುರ ಜಯಂತಿ ಆಚರಿಸಿದ JNU ಮಾಜಿ ವಿದ್ಯಾರ್ಥಿಗ ಸ್ಟಾರ್ ಕ್ಯಾಂಪೇನ್..!!

ಈ ಕಮ್ಯುನಿಸ್ಟ್ ಅವಕಾಶವಾದಿತನಕ್ಕೆ ಏನನ್ನ ಬೇಕು ಗೊತ್ತಾಗುತ್ತಿಲ್ಲ. ಮಾಹರ್ ಸಮುದಾಯ ಕೇವಲ ಬ್ರಾಹ್ಮಣರ ದಬ್ಬಾಳಿಕೆ ಖಂಡಿಸಿ ಯುದ್ಧ ಮಾಡಿದರು ಎಂಬ ಏಕೈಕ ಕಾರಣದಿಂದ ಈ ಹಡಬೆಗಳು ಕೋರೆಗಾಂವ್ ಗೆ ಬಂದು ಇಡೀ ಹಿಂದೂ ಸಮಾಜವನ್ನು ಬಯ್ಯುತ್ತಾರೆ ಎಂದಾದರೆ ಇವರಿಗೆ ವರ್ಷ ಪೂರ್ತಿಗೆ ಆಗುವಷ್ಟು ಮುಸಲ್ಮಾನರು ಶಿಯಾಸುನ್ನಿ ಹೆಸರಲ್ಲಿ ಕಚ್ಚಾಡಿ ಸಾಧಿಸಿದ ಯುದ್ಧವಿಜಯಗಳನ್ನು ನಾನು ನೀಡುತ್ತೇನೆ ತಾಕತ್ತಿದ್ದರೆ ಈ ನರಸತ್ತವರು ಭಾಷಣ ಮಾಡಿ ಸುರಕ್ಷಿತವಾಗಿ ಮನೆ ತಲುಪಬೇಕು.

ಔರಂಗಜೇಬನ ಕ್ರೌರ್ಯವನ್ನು ಖಂಡಿಸಿ ಇತರ ಮುಸ್ಲಿಂ ರಾಜ್ಯಗಳು ಹಿಂದೂ ರಾಜರೊಂದಿಗೆ ಕೈ ಜೋಡಿಸಿ ಮಾನವೀಯತೆಯ ಪರವಾಗಿ ಹೋರಾಟ ಮಾಡಿದ್ದಾರೆ ಯಾಕೆ ಈ ಯುದ್ಧ ಗಳನ್ನು ಸಂಭ್ರಮಿಸಬಾರದು..?

ದಲಿತ ಮತ್ತು ಬ್ರಾಹ್ಮಣರ ನಡುವೆ ಯಾವುದಾದರೂ ಜನಾಂಗೀಯ ಸಂಘರ್ಷ ನಡೆದಿದೆಯೇ.? ಅದನ್ನು ಮುಂದಿಟ್ಟುಕೊಂಡು ನಾವು ಹೇಗೆ ಅನ್ನ ಕಂಡುಕೊಳ್ಳಬಹುದು ಎಂದು ಹೊಂಚು ಹಾಕುತ್ತಿದ್ದ ಈ ರಾಷ್ಟ್ರಘಾತುಕರಿಗೆ ಇತಿಹಾಸದ ಪುಟಗಳಲ್ಲಿ ಎದ್ದು ಕಂಡಿದ್ದು ಈ ಕೋರೆಗಾಂವ್ ಯುದ್ಧ. ಅದರ ಸಂಭ್ರಮಾಚರಣೆಯ ಹೆಸರಲ್ಲಿ ಇದೀಗ ಮುಂಬೈಗೆ ಬೆಂಕಿ ಇಟ್ಟಿದ್ದಾರೆ.

ಈ ವಿಘ್ನ ಸಂತೋಷಿಗಳಿಗೆ ಬ್ರಾಹ್ಮಣ ಮತ್ತು ದಲಿತರು ಬಡಿದಾಡಿದ ಉದಾಹರಣೆಗಳೇ ಬೇಕಿದ್ದರೆ ಬಹಳಷ್ಟು ಸಿಗುತ್ತವೆ. ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಚಿತ್ಪಾವನ ಬ್ರಾಹ್ಮಣರಾದ ನಾನಾ ಸಾಹೇಬ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿಯ ಲಕ್ಷ್ಮಿಭಾಯಿ ಮೊದಲಾದವರು, ಆಗ ಬ್ರಿಟೀಷರ ಜೊತೆ ಸೇರಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಿದವರೂ ಇದೇ ಮಾಹರ್ ರೆಜಿಮೆಂಟ್ ಸೈನಿಕರು..!! ಇದರ ವಿಜಯೋತ್ಸವವನ್ನೂ ನಡೆಸಿ ನೋಡೊಣ.

ದಿಲ್ಲಿಯಲ್ಲಿ ರಾಮ್ ಪುಣಿಯಾನಿಯನ್ನು ಕರೆಸಿ ಔರಂಗಜೇಬನ ಗುಣಗಾನ ಮಾಡಿ ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸುವ ಈ ಉಮರ್ ಖಾಲೀದ್ ಮತ್ತು ಸಹಚರರನ್ನು ಮಹಾರಾಷ್ಟ್ರ ದ ಜನರು ತಮ್ಮ ಎಂದಿನ ಶೈಲಿಯಲ್ಲಿ ಕಾಲರ್ ಪಟ್ಟಿ ಹಿಡಿದು ಉಪಚರಿಸಿ ಕಳುಹಿಸಬೇಕಿತ್ತು. ಹಿಂದೂ ಸಮಾಜವನ್ನು ಹಂತ ಹಂತವಾಗಿ ಒಡೆಯುತ್ತಿರುವ ಈ ಬ್ರಿಟೀಷರ ಹಾದರದ ಸಂತತಿಗಳು ಒಡೆದು ಆಳುವ ನೀತಿಯನ್ನು ದೇಶದಲ್ಲಿ ಮತ್ತೆ ಜಾರಿಗೆ ತರುತ್ತಿವೆ.. ಈ ಗೋಸುಂಬೆಗಳು ನೀಲಿ ಬಾವುಟದ ಜೊತೆ ಕೇಸರಿ ಹಿಡಿದು ಕೊಂಡು ದಲಿತರನ್ನು ಇತರ ಸಮಾಜದ ವಿರುದ್ಧ ಎತ್ತಿ ಕಟ್ಟಲು ಸಾಕಷ್ಟು ಕಾರ್ಯಸೂಚಿಗಳನ್ನು ಹಾಕಿಕೊಂಡಿದ್ದಾರೆ ಮಹಾರಾಷ್ಟ್ರಿಕರೇ, ಹಿಂದೂ ದಲಿತರೇ ಎಚ್ಚರಾ,ಎಚ್ಚರಾ ಎಚ್ಚರ..

(ಸಂಗ್ರಹ) Kusuma Harijan
ಕುಸುಮ ಹರಿಜನ್ ಇವರಿಗೆ ಧನ್ಯವಾದಗಳು.
ಯಾರ ಮನಸಿಗೆ ಸಹ ನೋವಾಗದಂತೆ ಪದಗಳ ಮೇಲೆ ಹಿಡಿತಸಾಧಿಸಿ ಅತ್ಯದ್ಭುತವಾಗಿ ಸತ್ಯತೆಯ ಪರಾಮರ್ಶಿಸಿ ಈ ಲೇಖನ ಬರೆದಿದ್ದಾರೆ..