ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಚರ್ಚಿತ ವಿಷಯವಾದ ಬಳ್ಳಾರಿ ಗಣಿಗಾರಿಕೆಗೆ 220 ವರ್ಷಗಳ ಇತಿಹಾಸವಿದೆ. ಮೈಸೂರು ಹುಲಿ ಎಂದೇ ಪ್ರಖ್ಯಾತನಾದ ಟಿಪ್ಪು ಸುಲ್ತಾನ್ ವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ ಆರಂಭಿಸಿದ ಮೊಟ್ಟಮೊದಲಿಗ.
ಗಣಿಗಾರಿಕೆ ತನ್ನ ಅಕ್ರಮತೆಯಿಂದ ಅಪಖ್ಯಾತಿಗೆ ಕಾರಣವಾಗಿದ್ದು ಮಾತ್ರ 2005ರಿಂದ ಈಚೆಗೆ. ಅದರ ಪೂರ್ವದಲ್ಲಿ ಗಣಿಗಾರಿಕೆ ಮಾಡುತ್ತಾರೆ ಎಂದರೆ ಅವರಿಗೆ ಸಾಲ ಹುಟ್ಟುತ್ತಿರಲಿಲ್ಲ. ಅಂದರೆ ಗಣಿಗಾರಿಕೆ, ಗಣಿ ಮಾಲೀಕರು ಎಂಬ ಶಬ್ದ ಅಷ್ಟು ಪ್ರಚಲಿತದಲ್ಲಿರಲಿಲ್ಲ. ಟಿಪ್ಪುಸುಲ್ತಾನ್ ಮೊದಲಬಾರಿಗೆ ವೈಜ್ಞಾನಿಕವಾದ ಗಣಿಗಾರಿಕೆಯನ್ನು ಈಗಿನ ಆಂಧ್ರಪ್ರದೇಶದಲ್ಲಿರುವ ಸುಗ್ಗಲಮ್ಮ ಗುಡ್ಡದಲ್ಲಿ ಆರಂಭಿಸಿದ. ಅಂದಿನಿಂದ ದೇಶ ಹಾಗೂ ರಾಜ್ಯದಲ್ಲಿ ಗಣಿಗಾರಿಕೆ ನಡೆಯುತ್ತಲೇ ಇದೆ. 220 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಗಣಿಗಾರಿಕೆ ಮಾತ್ರ ಈ ಏಳೆಂಟು ವರ್ಷಗಳಲ್ಲಿ ಅನೇಕ ಬೆಳವಣಿಗೆಗೆ ಮತ್ತು ಅಪಖ್ಯಾತಿಗೆ ಕಾರಣವಾಗಿದ್ದು ಖೇದಕರ ಎನ್ನಬಹುದು.
1900ರಲ್ಲಿ ಜಗತ್ತಿಗೆ ಬಳ್ಳಾರಿ ಗಣಿ ಪರಿಚಯ
1900ರಲ್ಲಿಯೇ ರಾಬರ್ಟ್ ಬ್ರೂಸ್ ಪೋರ್ಟ್ ಅವರು ಬಳ್ಳಾರಿ, ಹೊಸಪೇಟೆ, ಸಂಡೂರಿನಲ್ಲಿ ದೊಡ್ಡದಾದ ಅದಿರು ನಿಕ್ಷೇಪವಿದೆ ಎಂದು ಜಗತ್ತಿಗೆ ಸಾರಿದರು. ಆದರೂ ಗಣಿಗಾರಿಕೆ ಅಷ್ಟು ಪ್ರಚಲಿತವಾಗಲಿಲ್ಲ. 1907ರಲ್ಲಿ ಬೆಲ್ಜಿಯಂ ಕಂಪನಿ ಸಂಡೂರಿನ ವೆಂಕಟರಾವ್ ಘೋರ್ಪಡೆ ಅವರಿಂದ ಜಮೀನು ಪಡೆದು ಮ್ಯಾಂಗನೀಸ್ ಗಣಿಗಾರಿಕೆ ಆರಂಭಿಸಿತು. ನಂತರ 1954ರಲ್ಲಿ ಸಂಡೂರು ಮಹಾರಾಜರಿಗೆ ಜಮೀನು ಹಿಂದಕ್ಕೆ ನೀಡಿತು. 1954ರಲ್ಲಿ ಸಂಡೂರಿನ ಯಶವಂತರಾವ್ ಘೋರ್ಪಡೆ ಅವರು ಸ್ಮಯೋರ್ ಕಂಪನಿ ಆರಂಭಿಸಿದರು. ಅಲ್ಲಿಂದ ಗಣಿಗಾರಿಕೆ ಬಳ್ಳಾರಿಯಲ್ಲಿ ಸಾಂಗವಾಗಿ ಆರಂಭವಾಯಿತು. ಆದರೂ ಹೆಚ್ಚು ಪ್ರಚಲಿತದಲ್ಲಿರಲಿಲ್ಲ.
ಪೋರ್ಟ್ ಪುಸ್ತಕದಲ್ಲಿ ಉಲ್ಲೇಖ
ಬ್ರಿಟಿಷರ ಆಡಳಿತದಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಅಧೀಕ್ಷಕ ರಾಬರ್ಟ್ ಬ್ರೂಸ್ ಪೋರ್ಟ್ ಅವರು ತಮ್ಮ ಜಿಯಾಲಜಿ ದಿ ಬಳ್ಳಾರಿ ಡಿಸ್ಟ್ರಿಕ್ ಮದ್ರಾಸ್ ಪ್ರೆಸಿಡೆನ್ಸಿ ಪುಸ್ತಕದಲ್ಲಿ ಟಿಪ್ಪುಸುಲ್ತಾನ್ ಅವರು 220 ವರ್ಷಗಳ ಹಿಂದೆಯೇ ಸುಗ್ಗಲಮ್ಮ ಗುಡ್ಡದಲ್ಲಿ ಗಣಿಗಾರಿಕೆ ಆರಂಭಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಮದ್ರಾಸ್ ಸೈನ್ಯದ ಮುಖ್ಯಸ್ಥ ನ್ಯೂವ್ ಬೋಲ್ಟ್ ಕೂಡ ಈ ನಿಟ್ಟಿನಲ್ಲಿ ಬೆಳಕು ಚೆಲ್ಲಿದ್ದಾರೆ. ರಾಕೆಟ್ ಉಡಾವಣೆಗೆ ಬೇಕಾಗುವ ಪೌಡರ್ ಅನ್ನು ಅದಿರು ಪುಡಿಯಿಂದ ಉತ್ಪಾದಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಗಣಿಗಾರಿಕೆ ಭೂಮ್ ಅವಧಿ
ಗಣಿಗಾರಿಕೆ ಕೆಲವೆ ಜನರಿಗೆ ಸೀಮಿತವಾಯಿತು. 2001-02ರ ಸುಮಾರಿಗೆ ಚೀನಾದಲ್ಲಿ ನಡೆದ ಒಲಿಂಪಿಕ್ಸ್ ಸಂದರ್ಭದಲ್ಲಿ ದೇಶದ ಕಬ್ಬಿಣದ ಅದಿರಿಗೆ ಭಾರಿ ಬೇಡಿಕೆ ಬಂದು, ಕೇವಲ 1000 ಒಳಗಿದ್ದ ಪ್ರತಿ ಟನ್ ಬೆಲೆ ರು. 3000, 4000 ಗಡಿ ದಾಟಿತು. ಇದರಿಂದಾಗಿ ಗಣಿಗಾರಿಕೆ ವಿಶ್ವರೂಪ ಪಡೆದುಕೊಳ್ಳಲು ಕಾರಣವಾಯಿತು. 1964ರಿಂದ 2000ರವರೆಗೆ ವರ್ಷಕ್ಕೆ ಕೇವಲ 4 ಲಕ್ಷ ಟನ್ ಉತ್ಪಾದನೆ ಇದ್ದ ಕಬ್ಬಿಣದ ಅದಿರು, 2003ರ ಹೊತ್ತಿಗೆ ಅಧಿಕೃತವಾಗಿ 40 ಲಕ್ಷ ಟನ್ ಗಡಿ ಮುಟ್ಟಿತು. ಇದರಿಂದಾಗಿ ಗಣಿಗಾರಿಕೆಯ ಮೇಲೆ ಜನಸಾಮಾನ್ಯರು, ಪ್ರಭಾವಿಗಳ ಕೆಂಗಣ್ಣು ಬೀಳಲು ಕಾರಣವಾಯಿತು. ಇನ್ನು ಅದಿರಿಗೆ ಬೆಲೆ ಬಂದ ಹಿನ್ನೆಲೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಮೂಲಕ ಅಕ್ರಮಕ್ಕೆ ನಾಂದಿಯಾಯಿತು.
ರೆಡ್ಡಿ ಸಹೋದರರು, ಶ್ರೀರಾಮುಲು ಎಂಟ್ರಿ
2002-03ರ ಹೊತ್ತಿಗೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಗಣಿಗಾರಿಕೆಗೆ ಎಂಟ್ರಿ ಆದರು. ಜಿ. ರಾಮಮೋಹನ್ ರಾವ್ ಅವರ ಗಣಿಯನ್ನು ಜನಾರ್ದನ ರೆಡ್ಡಿ ಖರೀದಿಸಿ, ಇಲ್ಲಿ ಗಣಿಗಾರಿಕೆ ಆರಂಭಿಸಿದರು. ಅಲ್ಲಿಂದ ಎಎಂಸಿ, ಓಎಂಸಿ ಸೇರಿದಂತೆ ಇತರೆ ಕಂಪನಿಯಿಂದ ಗಣಿ ಭೂಮ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಗಣಿ ಮಾಲೀಕರೆನಿಸಿಕೊಂಡ ಸಂತೋಷ್, ಅನಿಲ್ ಲಾಡ್, ಎಚ್.ಆರ್. ಗವಿಯಪ್ಪ, ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿದಂತೆ ಇತರರು ರಾಜಕೀಯಕ್ಕೆ ಪ್ರವೇಶ ಪಡೆದರು. 2004ರ ಚುನಾವಣೆಯಲ್ಲಿ ರಾಜಕೀಯದಲ್ಲಿ ಗಣಿಗಾರಿಕೆ ಬೆರೆತು ಹೋಯಿತು. ಗಣಿ ಮಾಲೀಕರು ರಾಜಕೀಯ ಎಂಟ್ರಿ ಕೊಟ್ಟಿದ್ದರಿಂದ ಅಧಿಕಾರಿ ವರ್ಗವು ಅವರ ಕೈಯಲ್ಲಾಯಿತು. ಇದರಿಂದಾಗಿ ಗಣಿಗಾರಿಕೆ ಹಣ ಗಳಿಕೆ ಸುಲಭವಾಗಿ, ಅಕ್ರಮ ಗಣಿಗಾರಿಕೆ ವಿಶ್ವರೂಪ ಪಡೆದುಕೊಳ್ಳುತ್ತಾ ಸಾಗಿತು. ಹಫ್ತಾ, ಜಿರೋ ಮೆಟರಿಯಲ್, ರಿಸ್ಕ್ ಅಮೌಂಟ್ ಕಲ್ಪನೆಗಳು ಗಣಿಗಾರಿಕೆ ಕ್ಷೇತ್ರದಲ್ಲಿ ಬಂದು, ಗಣಿಗಾರಿಕೆ ಅಪಕೀರ್ತಿಗೆ ಕಾರಣವಾಯಿತು. ಅದಿರು ನಿಕ್ಷೇಪದಲ್ಲಿ ಆಗರ್ಭ ಶ್ರೀಮಂತಿಕೆಯನ್ನು ಹೊಂದಿದ್ದ ಬಳ್ಳಾರಿ, ಯಾರೋ ಬೆರಳೆಣಿಕೆಯ ಜನ ಮಾಡಿದ ಅವಾಂತರಕ್ಕೆ ಇಡೀ ಜಿಲ್ಲೆ ಅಪಕೀರ್ತಿಗೆ ಕಾರಣವಾಗಿದ್ದು ದುರಂತವೇ ಸರಿ.
ಬಂಡಿ, ಕತ್ತೆಗಳ ಮೂಲಕ ಅದಿರು ಸಾಗಣೆ
1950ರ ದಶಕದಲ್ಲಿ ಟಪಾಲ್ ನಾರಾಯಣ ರೆಡ್ಡಿ, ಗೊಗ್ಗ ಗುರುಶಾಂತಯ್ಯ, ಪತ್ತಿಕೊಂಡ ಬಾಲಸುಬ್ಬಶೆಟ್ಟಿ, ವಡ್ಡರ ನಾಗಪ್ಪ, ಸಿಂದಗಿ ಸಿದ್ದಬಸಪ್ಪ, ದಾಲ್ಮಿಯಾ, ಎಚ್.ಜಿ. ರಂಗನಗೌಡ ಅವರು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡರು. ನಂತರದಲ್ಲಿ ಲಾಡ್ ಸಹೋದರರು, ಅಲ್ಲಂ ಕುಟುಂಬ, ಕೆ.ಎಂ.ಕೊಟ್ರಪ್ಪ, ಎಸ್.ಕೆ. ಮೋದಿ, ಎಂಎಸ್‌ಪಿಎಲ್, ಬಲ್ಡೋಟ ಸೇರಿದಂತೆ ಇತರರು ಗಣಿಗಾರಿಕೆ ಆರಂಭಿಸಿದರು. ಆದರೆ ಆರ್ಭಟ ಮಾತ್ರ ಇರಲಿಲ್ಲ. ಗಣಿಗಾರಿಕೆ ಇದೆ ಎಂಬುದು ಸಾಮಾನ್ಯ ಜನರಿಗೆ ತಿಳಿದಿರಲಿಲ್ಲ. ಗುಡ್ಡಗಾಡಿನಲ್ಲಿ ಕಬ್ಬಿಣದ ಅದಿರನ್ನು ಬಂಡಿ, ಕತ್ತೆಗಳ ಮೂಲಕ ಸಾಗಿಸುವ ಪರಿಯಿತ್ತು. ಇಂದು ರೈಲು ವ್ಯಾಗನ್ ಬಳಕೆ ಇರುವುದು ಎಲ್ಲರಿಗೂ ತಿಳಿದ ವಿಷಯ.
1996ರಲ್ಲಿ ಅದಿರು ರಫ್ತಿಗೆ ಪರವಾನಗಿ
1953ರ ಸುಮಾರಿಗೆ 165 ಎಂಎಂ ಕಬ್ಬಿಣ ಕಲ್ಲು (ಲಮ್ಸ್) ಪ್ರತಿ ಟನ್‌ಗೆ ಕೇವಲ 16 ರಿಂದ 18 ಇತ್ತು. 1973ರಲ್ಲಿ ವಿಜಯನಗರ ಸ್ಟೀಲ್ಸ್‌ಗೆ ಇಂದಿರಾಗಾಂಧಿ ಶಂಕುಸ್ಥಾಪನೆ ನೆರವೇರಿಸಿದರು. ಜಿಂದಾಲ್ ಆರಂಭವಾದ ನಂತರ ಜಿಂದಾಲ್ 1994ರಲ್ಲಿ ಕಬ್ಬಿಣದ ಅದಿರಿನ ಬೆಲೆ ಪ್ರತಿ ಟನ್‌ಗೆ 104 ಮಾಡಿತು. ನಂತರದ ದಿನಗಳಲ್ಲಿ 400 ಮಾಡಿದರೂ, ಆಗ ಕೇವಲ ಅಲ್ಪದುಡ್ಡಿನಲ್ಲಿ ಕಾಲ ಕಳೆಯುತ್ತಿದ್ದ ಗಣಿ ಮಾಲೀಕರಿಗೆ ಗಣಿಗಾರಿಕೆ ರುಚಿಸತೊಡಗಿತು. ಚಟುವಟಿಕೆ ಚದುರಿಕೊಂಡಿತು. 1996ರಲ್ಲಿ ಎಂಎಸ್‌ಪಿಎಲ್, ಹೊತೂರು ಕುಟುಂಬದವರು ಗಣಿಗಾರಿಕೆ ರಫ್ತಿಗೆ ಪರವಾನಗಿ ತಂದರು. ಹೀಗೆ ಗಣಿಗಾರಿಕೆ ಪ್ರಚಲಿತವಾಗುತ್ತಾ ಸಾಗಿತು.