ಬ್ರಾಹ್ಮಣವಾದ, ಮನುವಾದ ಎನ್ನುವುದೇ ಇಲ್ಲ. ಅದು ಸಂತರನ್ನು, ಶಾಸ್ತ್ರಗಳನ್ನು, ಅವಮಾನ ಮಾಡುವುದಕ್ಕೆ ಸೆಕ್ಯೂಲರ್ ಮಾಫಿಯಾ ಹುಟ್ಟುಹಾಕಿದ ಶಬ್ದ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ.
ಬ್ರಾಹ್ಮಣವಾದ, ಮನುವಾದ ಎನ್ನುವುದೇ ಇಲ್ಲ. ಅದು ಸಂತರನ್ನು, ಶಾಸ್ತ್ರಗಳನ್ನು, ಬ್ರಾಹ್ಮಣರನ್ನು ಅವಮಾನ ಮಾಡುವುದಕ್ಕೆ ಸೆಕ್ಯೂಲರ್ ಮಾಫಿಯಾ ಹುಟ್ಟುಹಾಕಿದ ಶಬ್ದ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ
ಕೆಲವು ರಾಜಕೀಯ ವ್ಯಕ್ತಿಗಳು, ಬುದ್ದಿ ಜೀವಿಗಳು ಹಿಂದು ಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಹಿಂಪರಿಷತ್ತನ್ನು ದಲಿತ ವಿರೋಧಿಗಳು ಎಂದು ಕರೆಯುತ್ತಾರೆ. ಇದು ಅಪ್ಪಟ ಸುಳ್ಳು. ದಲಿತರನ್ನು ಮುಖ್ಯವಾಹಿನಿಗೆ ತರುವುದಕ್ಕೆ ಮೊದಲು ಪ್ರಯತ್ನ ಮಾಡಿದ್ದೇ ವಿಹಿಂಪ.
ದೇಶಕ್ಕೆ ಸ್ವಾತಂತ್ರ್ಯ ದೊರೆಯುವಾಗ ೧೯೪೭ರಲ್ಲಿ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಬಹಳ ದೊಡ್ಡ ಮಟ್ಟದಲ್ಲಿತ್ತು. ೧೯೭೦ರಲ್ಲಿ ತಾನು ಹರಿಜನ ಕೇರಿಗಳಿಗೆ ಹೋಗಿದ್ದಾಗ ಸಂಪ್ರದಾಯಸ್ಥ ಸಂತರು ವಿರೋಸಿದ್ದರು. ಕ್ರಮೇಣ ಅವರೂ ತನ್ನನ್ನು ಬೆಂಬಲಿಸಿದ್ದರು. ಹಿಂದಿನ ಕಾಲಪರಿಸ್ಥಿತಿಗೆ ಹೋಲಿಸಿದಲ್ಲಿ ಈಗ ಅಸ್ಪಶ್ಯತೆ ಪ್ರಮಾಣ ಕಡಿಮೆಯಾಗಿದೆ. ಇಂದು ಅದೇ ಸಂತರು ಬದಲಾಗಿದ್ದಾರೆ , ದಲಿತ ಕೇರಿಗೆ ಹೋಗುತ್ತಿದ್ದಾರೆ. ಬದಲಾವಣೆಯಾಗುತ್ತಿದೆ. ಆದರೂ ಉಳಿದಿರುವ ಅಲ್ಪಸ್ವಲ್ಪ ಅಸ್ಪೃಶತೆಯನ್ನೂ ತೊಡೆದು ಹಾಕಬೇಕು.
