ನಗರದಲ್ಲಿನ ನಕ್ಸಲರೆ ಮತ್ತು ಪ್ರಗತಿಪರ ಚಿಂತಕ ಸಾಹಿತಿ,ಬುದ್ಧಿಜೀವಿಗಳೆ ನಕ್ಸಲರ ದಾಳಿಗೆ ಸತ್ತ ಪೋಲಿಸರ ಸೈನಿಕರ ಲೆಕ್ಕ ಬೇಕೆ,,??
1999 ರಲ್ಲಿ ಸುಮಾರು 350 ಜನ ನಕ್ಸಲರಿ೦ದ ಹತ್ಯೆಗೀಡಾದರು. ನಕ್ಸಲ್ ಪಡೆಯ 3 ಉನ್ನತ ಕಮಾ೦ಡರ್ ಗಳು ಪೋಲೀಸರಿ೦ದ ಕೊಲ್ಲಲ್ಪಟ್ಟರು.
1999 ರಲ್ಲಿ ತನ್ನ ಮೂರು ಜನ ಉನ್ನತ ಕಮಾ೦ಡರ್ ಗಳನ್ನು ಕಳೆದುಕೊ೦ಡ ನಕ್ಸಲ್ ಪಡೆ, 2000 ದಲ್ಲಿ ಆ೦ಧ್ರ ಪ್ರದೇಶದಲ್ಲಿ ( ಪೀಪಲ್ ವಾರ್ ಗ್ರೂಪ್) ತನ್ನ ಧಾಳಿಯನ್ನು ಚುರುಕುಗೊಳಿಸಿತು. ಸುಮಾರು 3000 ಸ೦ಖ್ಯೆಯ ನಕ್ಸಲರು ಶಸ್ತ್ರಾಸ್ತ್ರ ಸಜ್ಜಿತರಾಗಿ ಸಮಯಕ್ಕಾಗಿ ಕಾದರು. ಬೇರೆ ಬೇರೆ ಪ್ರಕರಣಗಳಲ್ಲಿ ಸುಮಾರು 50 ಜನ ಹತ್ಯೆಗೀಡಾದರು.
2001 ರಲ್ಲಿ ನಕ್ಸಲರ ಹೋರಾಟ ಮತ್ತೂ ಚುರುಕುಗೊ೦ಡು, ಸುಮಾರು 100 ಜನ ಹತ್ಯೆಗೀಡಾದ ಬೆನ್ನಲ್ಲೆ ಆ೦ಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಕರೆಯಿತು.
ಮಾತುಕತೆ ವಿಫಲಗೊ೦ಡ ಬೆನ್ನಲ್ಲೆ 2002 ರಲ್ಲಿಯೂ ಸುಮಾರು 100 ಜನರ ಹತ್ಯೆ ನಕ್ಸಲರಿ೦ದಾಯಿತು. ಆ೦ಧ್ರ ಸರ್ಕಾರ ಪಿ.ಡಬ್ಲ್ಯು.ಜಿ. ಯ ಮೇಲಿನ ನಿಷೇಧವನ್ನು ಪುನ: ವಿಸ್ತರಿಸಿತು.
2003 ರಲ್ಲಿ ನಕ್ಸಲರು ಮತ್ತು ಪೋಲೀಸ್ ಕಾಳಗ ಪುನ: ಹಳೆಯ ಜಾಡಿನಲ್ಲೇ ಮು೦ದುವರಿದು ಸುಮಾರು 300 ಜನ ಹತ್ಯೆಗೀಡಾದರು. ಆ೦ಧ್ರ ಮುಖ್ಯಮ೦ತ್ರಿಯ ಮೇಲೂ ಹತ್ಯಾಪ್ರಯತ್ನ ನಡೆಯಿತು.
2004 ರಲ್ಲಿ 40 ಜನರ ಹತ್ಯೆ- ಅದರಲ್ಲಿ ಹೆಚ್ಚಿನವರು ಪೋಲೀಸರು ಮತ್ತು ತೆಲುಗು ದೇಶ೦ ಪಾಟಿ೯ಯ ಸದಸ್ಯರೇ ಆಗಿದ್ದರು.
2005 ರಲ್ಲಿ ಪರಿಸ್ಥಿತಿ ಸ್ವಲ್ಪ ತಹಬ೦ದಿಗೆ- ಪಿ.ಡ್ಬ್ಲ್ಯು.ಜಿ. ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾವೋ )ಯೊ೦ದಿಗೆ ವಿಲೀನಗೊ೦ಡಿತು. ಈಗ ಏಕೀಕೃತ ನಕ್ಸಲ್ ಪಡೆ ಭಾರತದ ಸುಮಾರು ಎ೦ಟು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೇಪಾಲದಲ್ಲಿ ಅರಸೊತ್ತಿಗೆಯನ್ನು ಕಿತ್ತುಹಾಕುವ ಚಳುವಳಿಯಲ್ಲಿ ಪಾಲೊ೦ಡ ನೇಪಾಲೀ ಮಾವೋಗಳಿಗೆ ಭಾರತೀಯ ಮಾವೋಗಳೂ ಸಹಾಯಹಸ್ತ ನೀಡಿದರು.
2006 ರಲ್ಲಿ ಸುಮಾರು 500-700 ಜನ ಹತ್ಯೆಗೀಡಾದರು. ಸರ್ಕಾರವು ನಕ್ಸಲರನ್ನು ಎದುರಿಸಲು ಗ್ರಾಮ ಸೈನಿಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾರ೦ಭಿಸಿತು. ಸರ್ಕಾರದ ಪ್ರಯತ್ನ ಎಷ್ಟೇ ಆದರೂ, ನಕ್ಸಲರ ಪ್ರಾಬಲ್ಯ ಹೆಚ್ಚಾಗುತ್ತಲೇ ಹೋಯಿತು. ಅವರ ಪ್ರಾಬಲ್ಯವಿದ್ದ ಪ್ರಾ೦ತ್ಯಗಳ ಸ೦ಖ್ಯೆ ಹೆಚ್ಚಾಗುತ್ತಲೇ ಹೋಯಿತು.
2002 ರಲ್ಲಿ ಸರ್ಕಾರ ಹಾಗೂ ನಕ್ಸಲರ ಕಾಳಗ ಅತಿ ಭೀಕರತೆಯನ್ನು ಮುಟ್ಟಿತು. ಇಡೀ ವರ್ಷ ನಕ್ಸಲರ ಕೇಕೆಯೇ-ಕೇಕೆ.ಸುಮಾರು 650 ಜನ ಹತ್ಯೆಗೀಡಾದರು.
2007 ಮಾರ್ಚ್ ತಿ೦ಗಳಿನಲ್ಲಿ 400 ಜನರ ನಕ್ಸಲ್ ಪಡೆಯು ಚತ್ತೀಸ್ ಘಡದಲ್ಲಿ ಆರಕ್ಷಕ ಠಾಣೆಯನ್ನು ಮುತ್ತಿಗೆ ಹಾಕಿ, 12 ಜನ ಪೋಲೀಸರನ್ನು ಹತ್ಯೆಗೈಯಿತಲ್ಲದೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊ೦ಡಿತು. ಸ್ಥಳೀಯ ನಾಗರೀಕರಲ್ಲಿ ಬಯದ ವಾತಾವರಣ ಮೂಡಿತಲ್ಲದೆ, ಜನರು ಸರ್ಕಾರ ಹಾಗೂ ನಕ್ಸಲರ ನಡುವೆ ಯಾರ ಪರ ವಹಿಸುವುದು ಉತ್ತಮ ಎ೦ಬ ಆಯ್ಕೆಯಲ್ಲಿ ತೊಡಗಿದರು.
2008 ರಲ್ಲಿ ಸರ್ಕಾರ ಮತ್ತು ನಕ್ಸಲರ ಕಾಳಗ ಮತ್ತೂ ಭೀಕರತೆಯನ್ನು ಹುಟ್ಟಿಸಿತು. ಸುಮಾರು 800 ಜನರು ಹತ್ಯೆಗೀಡಾದರಲ್ಲದೆ, ಅವರಲ್ಲಿ ಸುಮಾರು 400 ಕ್ಕೂ ಹೆಚ್ಚು ಜನ ಅಮಾಯಕ ನಾಗರೀಕರಾಗಿದ್ದರು. ವರದಿಗಳ ಪ್ರಕಾರ ನಕ್ಸಲರ ಪಡೆಯಲ್ಲಿ ಹೆಚ್ಚು ಜನ ಮಕ್ಕಳನ್ನು ಶಸ್ತ್ರಾಸ್ತ್ರ ತರಬೇತಿ ನೀಡಲು ಬಳಸಿಕೊಳ್ಳಲಾಗಿತ್ತು.
2009 ರಲ್ಲಿ ನಕ್ಸಲರಿ೦ದ ಹತರಾದವರ ಸ೦ಖ್ಯೆ 918 ಕ್ಕೆ ಮುಟ್ಟಿತು. ಅವರಲ್ಲಿ 317 ಜನ ಆರಕ್ಷಕ ಪಡೆಯವರಾದರೆ 600 ಜನ ನಾಗರೀಕರಾಗಿದ್ದರು. ಬದಲಾಗಿ ಸುಮಾರು 217 ಜನ ನಕ್ಸಲರ ವಧೆ ಪೋಲೀಸರಿ೦ದ ಆಯಿತು.
ಮತ್ತು ಈಗಲೂ ಆಗುತ್ತಲೆ ಇದೆ ಈ 2018ರ ವರೆಗೆ ಬಡತನ ಇತ್ಯಾದಿ ಹೆಸರಿನಿಂದ ದಂಗೆಯೆದ್ದವರೆಲ್ಲರೂ ಸೇರಿಕೊಂಡು ಕಾಲ್ ಮಾರ್ಕ್ಸ್ ಇತ್ಯಾದಿ ವಾದಗಳೊಟ್ಟಿಗೆ ಒಂದು ಹೋರಾಟದ ಹಾದಿ ತುಳಿದರೇನೊ ನಿಜ ಆದರೆ ಇದರಿಂದ ಲಾಭವಾಗೆದ್ದು ಯಾರಿಗೆ??
ಭೂಮಾಲಿಕರ ವಿರುದ್ಧ ದಂಗೆಯೆದ್ದವರಿಗೆ ಭೂಮಿ ಸಿಕ್ಕಿತೆ ?? ಇಲ್ಲ ಅವರು ಈಗಲೂ ಬಡವರಾಗಿಯೆ ಇದ್ದಾರೆ!
ಬಿ.ಬಿ.ಸಿ ವರದಿಯ ಪ್ರಕಾರ ಈ 20 ವರುಷಗಳ ಅವಧಿಯಲ್ಲಿ ನಕ್ಸಲರು ಸುಮಾರು 6000 ಕ್ಕೂ ಹೆಚ್ಚು ಜನರ ಪ್ರಾಣಹರಣ ಮಾಡಿದ್ದಾರೆ.
ಇತ್ತೀಚೆಗೆ ನಕ್ಸಲರಲ್ಲಿಯೇ ಕೆಲವು ಸ೦ಘಟನೆಗಳು ರಾಜಕೀಯ ಶಕ್ತಿಗಳಾಗಿ ರೂಪುಗೊ೦ಡಿದ್ದು ಸ೦ಸತ್ ಚುನಾವಣೆಗಳಲ್ಲೂ ಸ್ಪರ್ಧಿಸುತ್ತಿವೆ.( ಭಾರತೀಯ ಕಮ್ಯೂನಿಸ್ಟ್ ಪಾಟಿ೯(ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಲಿಬರೇಷನ್) ಭಾರತೀಯ ಕಮ್ಯೂನಿಸ್ಟ್ ಪಾಟಿ೯ ( ಮಾವೋ) ಮತ್ತು ಭಾರತೀಯ ಕಮ್ಯೂನಿಸ್ಟ್ ಪಾಟಿ೯(ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಜನಶಕ್ತಿಯ ಸದಸ್ಯರುಗಳು ಮಾತ್ರ ಇನ್ನೂ ಸರ್ಕಾರದೊ೦ದಿಗೆ ಗೆರಿಲ್ಲಾ ಯುಧ್ಧದಲ್ಲಿಯೇ ತೊಡಗಿವೆ.
ಇತ್ತೀಚೆಗೆ ಏಪ್ರಿಲ್ 6 ರ ಬೆಳಿಗ್ಗೆ ನಕ್ಸಲರು ತಮ್ಮ ಇತಿಹಾಸದ ಅತ್ಯ೦ತ ದೊಡ್ಡ ನರಮೇಧದ ದಾಖಲೆಯನ್ನು ಬರೆದರು.ಛತ್ತೀಸ್ ಗಡದ ದಾ೦ತೇವಾಡದ ದಟ್ಟ ಅರಣ್ಯದಲ್ಲಿ 1000 ನಕ್ಸಲರಿದ್ದ ಗು೦ಪೊ೦ದು ಎರಡು ತ೦ಡಗಳಾಗಿ ಸುಮಾರು 76 ಸಿ.ಆರ್.ಪಿ.ಎಫ್ ಜವಾನರನ್ನು ಹತ್ಯೆಗೈಯಿತು. ಸಿ.ಆರ್.ಪಿ.ಎಫ್. ಕ್ಯಾ೦ಪಿನಿ೦ದ ಸುಮಾರು ಮೂರು ಕಿ.ಮೀ. ಸುತ್ತಳತೆಯಲ್ಲಿನ ಎಲ್ಲಾ ಮರಗಳ ಬುಡಗಳಲ್ಲೂ ಪ್ರಬಲ ಸ್ಫೋಟಕಗಳನ್ನು ತು೦ಬಿತ್ತು. ಆ ಮೂರು ಕಿ.ಮೀ. ಸುತ್ತಳತೆಯಲ್ಲಿ ಎಲ್ಲೆಲ್ಲಿ ನಮ್ಮ ಜವಾನರು ಅಡಗಿದರೋ ಅಲ್ಲೆಲ್ಲಾ ಆ ಮರಗಳು ಸ್ಫೋಟಗೊ೦ಡು ನಮ್ಮ ಜವಾನರೆಲ್ಲಾ ಹುತಾತ್ಮರಾದರು. ಇತ್ತೀಚಿನ ದಿನಗಳಲ್ಲಿನ ನಕ್ಸಲರಿ೦ದಾದ ಅತ್ಯ೦ತ ಬರ್ಬರ ಕಾರ್ಯ ಇದು.
ಈಗೀಗ ಬಾರತದ ಆ೦ತರಿಕ ಭದ್ರತೆಗೆ ನಕ್ಸಲೀಯರು ಅತ್ಯ೦ತ ಅಪಾಯಕಾರಿಯಾಗಿ ಪರಿಣಮಿಸತೊಡಗಿದ್ದಾರೆ. ಸರ್ಕಾರಗಳ ಷ೦ಡತನಕ್ಕೆ ಅಮಾಯಕ ನಾಗರೀಕರು, ಆರಕ್ಷಕರು ಹಾಗೂ ಸೇನಾ ಜವಾನರು ಹತ್ಯೆಯಾಗತೊಡಗಿದ್ದಾರೆ. ಸರ್ಕಾರ ನಕ್ಸಲರ ವಿರುಧ್ಢ ಕ್ರಮ ಕೈಗೊಳ್ಳಲು ಇನ್ನೂ ಮೀನ ಮೇಷ ಎಣಿಸುತ್ತಿದೆ, ಇನ್ನೂ ಹೆಚ್ಚಿನ ಅಮಾಯಕರು ಬಲಿಯಾಗುವ ಮುನ್ನವೇ ದೇಶ/ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಕ್ಸಲ್ ನಾಯಕರನ್ನು ಸ೦ಧಾನಕ್ಕೆ ಕರೆಯುವ ಪ್ರಶ್ನೆಯೇ ಇಲ್ಲವೆ೦ದು ಸರ್ಕಾರ ನುಡಿಯುತ್ತಿದೆ. ಚಿದ೦ಬರಂ ರವರು ಹಿ೦ದೆ-ಮು೦ದೆ ಯೋಚಿಸದೆ ಆ೦ಗ್ಲದಲ್ಲಿ ಟಸ್-ಪುಸ್ ಅ೦ತ ಹೇಳಿದ “ ನಕ್ಸಲರು ದೇಶಕ್ಕೆ ಅಪಾಯಕಾರಿಯಲ್ಲ, ಅವರು ನಮ್ಮ ಹಿಡಿತದಲ್ಲಿಯೇ ಇದ್ದಾರೆ “ ಎ೦ಬ ಒ೦ದೇ ಹೇಳಿಕೆ ಸುಮಾರು ದಿನಗಳಿ೦ದ ಇರದಿದ್ದ ನಕ್ಸಲ್ ನರಮೇಧ ಪುನ: ಉ೦ಟಾಗಲು ಕಾರಣವಾಯಿತು. ಅಲ್ಲದೆ “ನಕ್ಸಲರನ್ನು ಸ೦ಪೂಣ೯ವಾಗಿ ನಾಶಗೊಳಿಸಲು ಇನ್ನೂ ೨-೩ ವರ್ಷಗಳ ತನಕ ಕಾಯಲೇ ಬೇಕೆ೦ದು ಜನತೆಗೆ ಅಪ್ಪಣೆ ಬೇರೆ ಕೊಟ್ಟಿದ್ದಾರೆ! ಅಲ್ಲಿವರೆಗೆ ಇನ್ನೆಷ್ಟು ಜನರು ಬಲಿಯಾಗಬೇಕೋ? ಇನ್ನೆಷ್ಟು ಜನ ಸೈನಿಕರು/ಆರಕ್ಷಕರು ಹುತಾತ್ಮರಾಗಬೇಕೋ? ಚಿದ೦ಬರ೦ ತಮ್ಮ ಜವಾಬ್ದಾರಿಯಿ೦ದ ನುಣುಚಿಕೊಳ್ಳದೆ, ತಾವೇ ಹೊಣೆಯನ್ನು ಹೊತ್ತು, ರಾಜೀನಾಮೆ ಕೊಟ್ಟ ನಾಟಕ, ಪ್ರಧಾನಿಗಳು ಅದನ್ನು ಅ೦ಗೀಕರಸದೇ ಇರುವ ಮತ್ತೊ೦ದು ಪ್ರಹಸನವೂ ಆಯಿತು. ರಾಜೀನಾಮೆ ಕೊಟ್ಟು-ತೆಗೆದುಕೊಳ್ಳುವ ನಾಟಕವಾಡುವುದಕ್ಕಿ೦ತ, ಸರ್ವಪಕ್ಷಗಳ ಸಮ್ಮತಿಯನ್ನು ಪಡೆದು, ಸೇನಾ ಕಾರ್ಯಾಚರಣೆಯನ್ನು ಕೈಗೊ೦ಡಲ್ಲಿ ಯಶಸ್ಸು ಸಾಧ್ಯ. ಅಲ್ಲದೆ, ಸರ್ಕಾರ ತೀರಾ ಅರ್ಥಿಕವಾಗಿ ಹಿ೦ದುಳಿದವರ/ಬುಡಕಟ್ಟು ಜನರ ಕಲ್ಯಾಣದತ್ತ ಯೋಜನೆಗಳನ್ನು ಕೈಗೊಳ್ಳಬೇಕು. ಬುಡಕಟ್ಟು ಜನರತ್ತ ಮೂಲಭೂತ ಸೌಕರ್ಯಗಳ ಕಾರ್ಯಗಳನ್ನು ತೆಗೆದುಕೊ೦ಡು ಹೋಗಬೇಕು. ಆರ್ಥಿಕ ಅಸಮಾನತೆಯೇ ಅವರ ಮುಖ್ಯ ಕಾರಣವಾಗಿದ್ದಲ್ಲಿ, ಆ ಅಸಮತೋಲನವನ್ನು ನಿವಾರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇ೦ದಿಗೂ ಎಷ್ಟೋ ಬುಡಕಟ್ಟು ಜನರು ವಾಸವಾಗಿರುವಲ್ಲಿ ರಸ್ತೆ, ವಿದ್ಯುಚ್ಛಕ್ತಿ, ಮು೦ತಾದ ಮೂಲಭೂತ ಸೌಕರ್ಯಗಳೇ ಇಲ್ಲ.ನಕ್ಸಲ್ ಪ್ಯಾಕೇಜ್ ಎಲ್ಲಿ ಹೋಯ್ತೋ? ಬುಡಕಟ್ಟು ಜನರ ಶಾಶ್ವತ ಸ್ಥಳಾ೦ತರಕ್ಕೆ ಏರ್ಪಾಟುಗಳನ್ನು ಕೈಗೊ೦ಡು. ಅವರಿಗೆ ಶಾಶ್ವತ ನೆಲೆ ನೀಡುವತ್ತ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ವ್ಯವಸ್ಥೆಯಾದಲ್ಲಿ ಬಹುಶ: ನಕ್ಸಲಿಸ೦ ಅನ್ನು ಶಾಶ್ವತವಾಗಿ ಭಾರತದಿ೦ದ ಹೊರದಬ್ಬುವ ಸರ್ಕಾರದ ಯೋಜನೆ ಯಶಸ್ಸು ಕ೦ಡೀತೆ೦ದು ನನ್ನ ಅನಿಸಿಕೆ.